ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕನ್ನಡಿಗ ಸುಹಾಸ್: ಸಚಿವ ಕೆ. ಗೋಪಾಲಯ್ಯ ಅವರಿಂದ ಅಭಿನಂದನೆ

ಜಪಾನ್ ರಾಜಧಾನಿ ಟೋಕಿಯೋದಲ್ಲಿ ವಿಶೇಷ ಚೇತನ ಕ್ರೀಡಾಪಟುಗಳಿಗಾಗಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ನಲ್ಲಿ ಉತ್ತರ ಪ್ರದೇಶದ ಜಿಲ್ಲಾಧಿಕಾರಿಯಾಗಿರುವ ಹಾಸನ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಎಲ್ ಯತಿರಾಜ್ ಅವರು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿರುವುದು ಭಾರತದ ಮೊದಲ ಐ ಎ ಎಸ್ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ ಸುಹಾಸ್ ಒಬ್ಬ ಕನ್ನಡಿಗ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಅಬಕಾರಿ ಸಚಿವ ಗೋಪಾಲಯ್ಯ ಹೇಳಿದರು.

ಸುಹಾಸ್ ಹಾಸನದ ಲಾಳನಕೆರೆಯಲ್ಲಿ ಜನಿಸಿ ಶಿವಮೊಗ್ಗ ದಲ್ಲಿ ಬೆಳೆದು ದಕ್ಷಿಣ ಕನ್ನಡದ ಸುರತ್ಕಲ್ ನಲ್ಲಿ ಎನ್ ಐ ಟಿ ಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಕಲಿತು ಉತ್ತರ ಪ್ರದೇಶದ ಐ ಎ ಎಸ್ ಅಧಿಕಾರಿಯಾಗಿ ಮಥುರಾದ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿದ್ದ ಇವರು ಆರು ಜಿಲ್ಲೆಗಳ ಡಿ ಎಂ ಆಗಿ ಸೇವೆ ಸಲ್ಲಿಸಿದ ನಂತರ ಈಗ ಗೌತಮ್ ಬುದ್ಧ ನಗರದ ಜಿಲ್ಲೆಯ ದಂಡಾಧಿಕಾರಿಯಾದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಹಲವು ಕ್ರೀಡಾಕೂಟದಲ್ಲಿ ಭಾಗವಹಿಸಿ ನಾಲ್ಕು ಚಿನ್ನದ ಪದಕ ಐದು ,ಬೆಳ್ಳಿ, ಎಂಟು ಕಂಚಿನ ಪದಕ ಗಳಿಸಿದ ಹೆಗ್ಗಳಿಕೆ ಪಾತ್ರರಾದ ಸುಹಾಸ್ ನಮ್ಮ ಕನ್ನಡಿಗ ಎಂದು ಹೇಳಲು ನಮಗೆ ಹೆಮ್ಮೆಯ ವಿಷಯವಾಗಿದೆ. ಸುಹಾಸ್ ಎಲ್ ಯತಿರಾಜ್ ರವರಿಗೆ ನಮ್ಮ ಹೃದಯ ಪೂರ್ವಕ ಅಭಿನಂದನೆಗಳು ಎಂದರು.

Related Posts

Leave a Reply

Your email address will not be published.