ತುಳುಕೂಟ ಕತಾರ್ ವತಿಯಿಂದ ನಡೆದ ಬ್ಯಾಡ್ಮಿಂಟನ್ ಪಂದ್ಯಾವಳಿ

ಒಲಿಂಪಿಕ್ ಕ್ರೀಡಾ ಕೂಟ ಕೋವಿಡ್ ನಿಂದ  ಒಂದು ವರ್ಷ ಮುಂದೂಡಲ್ಪಟ್ಟು ಈ ವರ್ಷ ನಡೆಸಲು ಜಪಾನ್ ಮುಂದಾಗಿದೆ.ಹಾಗೇನೇ ಕೊಲ್ಲಿ ರಾಷ್ಟ್ರದಲ್ಲೂ ಕೋವಿಡ್ ಪ್ರಕರಣ ಕಡಿಮೆ ಯಾಗಿ  ಕ್ರೀಡಾ ಕೂಟ  ನಡೆಸಲು ಸರ್ಕಾರ ಹಸಿರು ನಿಶಾನೆ ನೀಡಿದ್ದು ಇದರಿಂದ ದೋಹಾ ಕತಾರ್ ನಲ್ಲಿ ಹೊಸಾ ಮಾರ್ಗಸೂಚಿ ಪ್ರಕಟಿಸಿ ಕ್ರೀಡಾ ಕೂಟಗಳು ನಡೆಸಲು ಅನುಮತಿ ನೀಡಿದೆ.

ಈ ನಿಟ್ಟಿನಲ್ಲಿ ತುಳುಕೂಟ ಕತಾರ್ ಜುಲೈ 9 ರಂದು ದೋಹಾ ದ ಕೇಂಬ್ರಿಡ್ಜ್ ಶಾಲೆಯಲ್ಲಿ ಕರ್ನಾಟಕ ಮೂಲದ ಸಂಘ ಸಂಸ್ಥೆಗಳ ನಡುವೆ ಬ್ಯಾಡ್ಮಿಂಟನ್ ಪಂದ್ಯಾವಳಿಯ 3ನೇ  ಋತುವಿನ ಫೈನಲ್ ಪಂದ್ಯಗಳನ್ನು ಆಯೋಜಿಸಿತು. ಎರಡು ದಿನಗಳ ಕ್ರೀಡಾಕೂಟದಲ್ಲಿ 8 ಕರ್ನಾಟಕ ಮೂಲದ ಸಂಸ್ಥೆಗಳಾದ ಕರ್ನಾಟಕ ಸಂಘ, ಕರ್ನಾಟಕ  ಮುಸ್ಲಿಂ ಕಲ್ಚರಲ್  ಆಸೋಸಿಯೇಷನ್ , ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ , ಮಂಗಳೂರು ಕ್ರಿಕೆಟ್ ಕ್ಲಬ್, ಬಂಟ್ಸ್ ಕತಾರ್, ಮಂಗಳೂರು ಕಲ್ಚರಲ್ ಅಸೋಸಿಯೇಷನ್ , ಕತಾರ್ ಬಿಲ್ಲವಾಸ್ ಮತ್ತು ಆತಿಥೇಯ ತುಳುಕೂಟ ಪಾಲು ಪಡೆಯಿತು.

105 ಕ್ರೀಡಾ ಪ್ರೇಮಿಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ ನಿಜವಾದ ಕ್ರೀಡಾಸ್ಪೂರ್ತಿ ಮತ್ತು ಉತ್ಸಾಹದಿಂದ ಮೆರೆದರು. ಪಂದ್ಯಾವಳಿಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ವಯಸ್ಕರವರೆಗೆ ವಿಭಾಗಗಳಿದ್ದು, ಉತ್ಸಾಹದಿಂದ ಪಾಲು ಪಡೆದರು.

ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕತಾರ್ ನ ಭಾರತೀಯ  ಕ್ರೀಡಾ ಕೇಂದ್ರ ದ  ಅಧ್ಯಕ್ಷ ಡಾ.ಮೋಹನ್ ಥಾಮಸ್ ಅವರು ಚಾಂಪಿಯನ್‌ಶಿಪ್ ಟ್ರೋಫಿಯನ್ನು ವಿಜೇತ ತಂಡ ತುಳುಕೂಟ ಕತಾರ್‌ಗೆ ವಿತರಿಸಿದರು.

ಈ ಸಂದರ್ಭದಲ್ಲಿ  ಕೂಟದ ಮುಖ್ಯ ಪ್ರಾಯೋಜಕರಾದ ಎಂ.ಪಲ್ಲೊಂಜಿ  ಕತಾರ್‌ನ ಜನರಲ್ ಮ್ಯಾನೇಜರ್ ಶ್ರೀ ಚಿದಾನಂದ್ ನಾಯಕ್ ಗೌರವ ಅತಿಥಿಗಳಾಗಿದ್ದರು. ಅದೇ ರೀತಿ ಈ ಸಂದರ್ಭದಲ್ಲಿ ಕ್ರೀಡಾಕೂಟದ ಇತರ ಪ್ರಾಯೋಜಕರು ಕೂಡ  ಉಪಸ್ಥಿತರಿದ್ದರು.

ತುಳುಕೂಟದ ಅಧ್ಯಕ್ಷರಾದ ಶ್ರೀಮತಿ ಚೈತಾಲಿ ಉದಯ್ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಸ್ವಾಗತಿಸಿದರು. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಕರ್ನಾಟಕ ಮೂಲದ ಎಲ್ಲಾ ಸಂಸ್ಥೆಗಳಿಗೆ ಧನ್ಯವಾದ ಅರ್ಪಿಸಿ,  ಕೃತಜ್ಞತೆಯ ಪ್ರತೀಕವಾಗಿ ಹಸಿರು ಸಸ್ಯಗಳನ್ನು  ಪ್ರಾಯೋಜಕರು ಮತ್ತು ಪ್ರತಿನಿಧಿಗಳಿಗೆ ವಿತರಿಸಿದರು, ಇದು ಕಳೆದ ತಿಂಗಳು ಪ್ರಾರಂಭವಾದ ಪರಿಸರ ಕಾಳಜಿ ಕಾರ್ಯಕ್ರಮದ ಉಪಕ್ರಮವಾಗಿದ್ದು ಭಾರತೀಯ ಸಾಂಸ್ಕೃತಿಕ ಸಂಸ್ಥೆ ಕೂಡ ಇದನ್ನು ಶ್ಲಾಘಿಸಿತ್ತು.

 

ತುಳುಕೂಟ 120 ಅಂಕಗಳೊಂದಿಗೆ  ಚಾಂಪಿಯನ್‌ಶಿಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು, ಕಳೆದ ಋತುವಿನಲ್ಲಿ ಚಾಂಪಿಯನ್ ಆದ ಮಂಗಳೂರು ಕ್ರಿಕೆಟ್ ಕ್ಲಬ್  35 ಪಾಯಿಂಟ್‌ಗಳೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸಿತು.
ತುಳುಕೂಟ ಕ್ರೀಡಾ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ವಂದಿಸಿ  ಕೂಟದಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾ ಪ್ರೇಮಿಗಳ ಕ್ರೀಡಾ ಸ್ಪೂರ್ತಿಗೆ ಅಭಿನಂದನೆ ಜೊತೆಗೆ  ಕೃತಜ್ಞತೆ ಸಲ್ಲಿಸಿದರು.

ನಿತೇಶ್ ದೊಡ್ಡಣಗುಡ್ಡೆ, ದೋಹಾ ಕತಾರ್ 

Related Posts

Leave a Reply

Your email address will not be published.