ಪರಿಸರಕ್ಕೆ ಕೊಡುಗೆ ನೀಡುವ ಜತೆಗೆ ಬಡವರ ಜೀವನಮಟ್ಟ ಸುಧಾರಣೆಗೆ ಆದ್ಯತೆ ನೀಡಿ : ಡಾ. ಅಗುಸ್ತಸ್ ಜಿ.ಎಸ್. ಅಜಾರಿಯಾ

ಬೆಂಗಳೂರು:  ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಅತ್ಯಂತ ವೇಗವಾಗಿ ಬದಲಾವಣೆಯಾಗುತ್ತಿದ್ದು, ಯಾವುದೇ ವೃತ್ತಿ ಆಯ್ಕೆ ಮಾಡಿಕೊಂಡರೂ ಅಲ್ಲಿ ಪರಿಸರಕ್ಕೆ ಕೊಡುಗೆ ನೀಡುವ ಜತೆಗೆ ಬಡವರ ಜೀವನ ಮಟ್ಟ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ಐ.ಬಿ.ಎಂ. ಇಂಡಿಯಾದ ದಕ್ಷಿಣ ಏಷ್ಯಾ ವಿಭಾಗದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ. ಅಗುಸ್ತಸ್ ಜಿ.ಎಸ್. ಅಜರಿಯಾ ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ಟ್ರಸ್ಟ್ ನ ಆರ್.ವಿ. ಮ್ಯಾನೆಜ್ ಮೆಂಟ್ ಸಂಸ್ಥೆಯ 2018-2020 ಮತ್ತು 2019- 2021ರ ಸಾಲಿನ ಪದವಿ ಪ್ರಧಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ, ಆಡಳಿತ ವ್ಯವಸ್ಥೆ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ ಸಮುದಾಯಕ್ಕೆ ಅಗಾಧವಾದ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವ ಜತೆಗೆ ಸಮಾಜಕ್ಕೆ ನೀವು ಸದಾ ಕೃತಜ್ಞರಾಗಿರಬೇಕು. ನೀವು ಯಶಸ್ಸು ಸಾಧಿಸಿದರೆ ಸಂಪತ್ತು, ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆಗ ತಮ್ಮ ಹುದ್ದೆಯನ್ನು ಮಾನವೀಯತೆ ಉದ್ದೇಶಕ್ಕೆ ಬಳಸುವ ಜತೆಗೆ ಬಡವರ ಶ‍್ರೇಯೋಭಿವೃದ್ಧಿಗಾಗಿ ಶ್ರಮಿಸುವಂತೆ ಕರೆ ನೀಡಿದರು.

ಡಿಜಿಟಲ್ ವ್ಯವಸ್ಥೆಯಲ್ಲಿ ಇಡೀ ಜಗತ್ತಿನ ಚಿತ್ರಣವೇ ಬದಲಾಗುತ್ತಿದ್ದು. ಭಾರತ ಐದು ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆಯ ರಾಷ್ಟ್ರವಾಗಿ ರೂಪುಗೊಳ್ಳುತ್ತಿದೆ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಯುವ ಸಮೂಹ ಭಾರತದಲ್ಲಿದ್ದು, ಉದ್ಯೋಗಾವಕಾಶದ ಆಯಾಮಗಳಲ್ಲಿ ವ್ಯಾಪಕ ಬದಲಾವಣೆಯಾಗುತ್ತಿದೆ. ಇತ್ತೀಚೆಗೆ ಗ್ಲಾಸ್ಗೋದಲ್ಲಿ ನಡೆದ ವಿಶ್ವ ನಾಯಕರ ಸಭೆಯಲ್ಲಿ ಹವಾಮಾನ ಬದಲಾವಣೆ ಕುರಿತು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ದೇಶ, ಜಗತ್ತನ್ನು ರಕ್ಷಿಸಲು ಪದವಿ ಪಡೆದವರು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬೇಕು. ಜೀವನದಲ್ಲಿ ದೊಡ್ಡ ಗುರಿ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ನ ಮುಖ್ಯಸ್ಥ ಎಂ.ಕೆ. ಪಾಂಡುರಂಗ ಶೆಟ್ಟಿ ಮಾತನಾಡಿ. ಗ್ರಾಹಕರೇ ನಮ್ಮ ದೇವರು, ಯಾವುದೇ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಗ್ರಾಕರು ಕರೆ ಮಾಡಿದರೆ ತಕ್ಷಣವೇ ಅದನ್ನು ಬಗೆಹರಿಸಲು ಸಜ್ಜಾಗಬೇಕು. ಗ್ರಾಹಕರನ್ನು ತೃಪ್ತಿಪಡಿಸಿದರೆ ಮಾಡಿದರೆ ಮಾತ್ರ ಯಶಸ್ಸಿನ ಮೆಟ್ಟಿಲು ಏರಲು ಸಾಧ್ಯ ಎಂದು ಸಲಹೆ ಮಾಡಿದರು.

ಸ್ವೀಮ್ ವೆಗೆಲ್ ನ ನಿರ್ದೇಶಕ ಪ್ರೊ. ಜೆ.ಆರ್. ಶರ್ಮಾ, ಎಚ್..ಡಿ.ಎಫ್.ಸಿ ಮಾಜಿ ಮುಖ್ಯಸ್ಥ ಎ. ರಾಜನ್, ಆರ್.ವಿ. ಡೆಂಟಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಆಶಾ ಐಯ್ಯಂಗಾರ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.