ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ  ಜಾರ್ಜ್ ಫೆರ್ನಾಂಡಿಸ್ ರ  91 ನೇ ಹುಟ್ಟು ಹಬ್ಬದ ಸಂಸ್ಮರಣೆ

ಮುಂಬಯಿ : ಮುಂಬಯಿ ಮಹಾನಗರದಲ್ಲಿ ನಾಡಿನ  ಅವಿಭಜಿತ ದಕ್ಷಿಣ ಕನ್ನಡ,. ಕಾಸರಗೋಡು ಜಿಲ್ಲೆಯ ವಿವಿಧ ಜಾತಿ ಬಾಂಧವರು ಶತಮಾನದ ಹಿಂದೆಯೇ ತಮ್ಮ ತಮ್ಮ ಜಾತೀಯ ಸಂಘಟನೆಯನ್ನು ಕಟ್ಟಿ ಮುಂಬಯಿಯಲ್ಲಿ ಮಾತ್ರವಲ್ಲ ನಾಡಿನಲ್ಲಿಯೂ ಸಮಾಜ ಸೇವೆ ಮಾಡುತ್ತಾ ಬರುವುದರೊಂದಿಗೆ ನಾಡಿನ ಹಾಗೂ ಅವರವರ ಜಾತೀಯ ಸಂಸ್ಕೃತಿಯನ್ನು ಹೊರನಾಡಿನಲ್ಲಿಯೂ ಉಳಿಸಿ ಬೆಳೆಸುತ್ತಾ ಬಂದಿರುವರು. ಮಹಾನಗರದ ವಿವಿಧ ಜಾತೀಯ ಸಂಘಟನೆಗಳ ಮುಖಂಡರು, ರಾಜಕಾರಣಿಗಳು, ಧಾರ್ಮಿಕ ನೇತಾರರು ಹಾಗೂ ವಿವಿಧ ಗಣ್ಯರ ಬೆಂಬಲದೊಂದಿಗೆ, ಕರಾವಳಿಯ ಜಿಲ್ಲೆಗಳ ಪ್ರಗತಿಗಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಯಶಸ್ವಿ  ಹೋರಾಟ ನಡೆಸುತ್ತಾ ಬಂದಿರುವ, ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ಆರಂಭದಿಂದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ, ಕೊಂಕಣ ರೈಲ್ವೆಯ ಶಿಲ್ಪಿ ಎಂದೇ ಗುರುತಿಸಿಕೊಂಡಿರುವ , ಮಾಜಿ ಕೇಂದ್ರ ಸಚಿವ ದಿ. ಜಾರ್ಜ್ ಫೆರ್ನಾಂಡೀಸ್  ಅವರ ಜನ್ಮ ದಿನವನ್ನು ಪ್ರತೀ ವರ್ಷ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಸಾರ್ವಜನಿಕ ಜೀವನದಲ್ಲಿನ ಸಾಧಕರೊಬ್ಬರನ್ನು ಗುರುತಿಸಿ ಪ್ರಶಸ್ತಿ ನೀಡಿ ಆಚರಿಸುತ್ತಾ ಬಂದಿದ್ದು ಇದೀಗ ಜಗತ್ತಿಗೇ ಆತಂಕವನ್ನುಂಟುಮಾಡಿದ ಮಹಾಮಾರಿ ಕೊರೋನಾದ  ಬಗೆಗಿನ ಸರಕಾರದ  ಲಾಕ್ ಡೌನ್ ನಿರ್ಬಂಧಗಳಿಂದಾಗಿ ಈ ವರ್ಷವೂ ದಿ. ಶ್ರೀ ಜಾರ್ಜ್ ಫೆರ್ನಾಂಡಿಸ್ ರ  91 ನೇ ಹುಟ್ಟುಹಬ್ಬದ ಸಂಸ್ಮರಣೆ ಸಮಾರಂಭವನ್ನು ವೆಬಿನಾರ್ ಮೂಲಕ ಆಚರಿಸಲಾಯಿತು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ  ಮಾರ್ಗದರ್ಶಕರೂ,  ದೇಶದ ಅಪ್ರತಿಮ ಜನ ಮೆಚ್ಚಿದ ನಾಯಕರೂ,  ಕಾರ್ಮಿಕ ಮುಖಂಡರೂ ಮತ್ತು ಮಾಜಿ  ರಕ್ಷಣಾ ಮಂತ್ರಿಯಾಗಿದ್ದ ಶ್ರೀ ಜಾರ್ಜ್ ಫೆರ್ನಾಂಡಿಸ್ ಅವರು 2 ವರ್ಷಗಳ ಹಿಂದೆ ಧೈವಾಧೀನರಾಗಿದ್ದು ಅವರ 91 ನೇ ಹುಟ್ಟುಹಬ್ಬದ ಸಂಸ್ಮರಣೆಯನ್ನು ಜೂ. 3 ರಂದು ಜಾಲತಾಣದಲ್ಲಿ ನಡೆಸಿದ ಸಭೆಯಲ್ಲಿ ಆಚರಿಸಲಾಗಿದ್ದು ಪ್ರಾರಂಭದಲ್ಲಿ  ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್ ಅವರು  ಸರ್ವರನ್ನೂ ಸ್ವಾಗತಿಸಿ  ಸಮಿತಿಯ ದಿವ್ಯ ಚೇತನರಾಗಿದ್ದ  ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಹುಟ್ಟುಹಬ್ಬದ ಸಾಂಕೇತಿಕ ಆಚರಣೆಯ ಬಗ್ಗೆ ತಿಳಿಸಿದರು.  ಅಲ್ಲದೆ ಜಾರ್ಜ್ ಅವರು ಸಮಿತಿ ಸಮಿತಿಯೊಂದಿಗೆ ಇದ್ದ ಒಡನಾಟವನ್ನು ಅವರು ನೀಡಿದ ಬೆಂಬಲದಿಂದ ಸಮಿತಿ ಮಾಡಿದ ಸಾಧನೆಗಳನ್ನು ತಿಳಿಸಿದರು
ಜಾರ್ಜ್ ಫೆರ್ನಾಂಡಿಸ್ ರ ನಿಕಟ ವರ್ತಿಗಳೂ, ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರೂ ಮತ್ತು  ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಎ  ಶೆಟ್ಟಿ ಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಜಾರ್ಜ್ ಫೆರ್ನಾಂಡಿಸ್ ರಂತಹ ವ್ಯಕ್ತಿ ನಮ್ಮ ದೇಶಕ್ಕೆ ಸದ್ಯಕ್ಕೆ ಸಿಗಲು ಅಸಾಧ್ಯ. ಇವರು ನಮ್ಮ ಜಿಲ್ಲೆಯವರಾಗಿದ್ದು ಇವರ ನೆನಪು ನಮ್ಮ ಜಿಲ್ಲೆಯಲ್ಲಿ ಶಾಶ್ವತವಾಗಿ ಇರಬೇಕಾಗಿದೆ . ಇಂದು ನಡೆದ ಸಭೆಯಲ್ಲಿ ಮಾತನಾಡಿನ ಜಾತೀಯ ಸಂಘಟನೆಗಳ ಎಲ್ಲಾ ಅಧ್ಯಕ್ಷರುಗಳು /ಪ್ರತಿನಿಧಿಗಳು  ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪುನಃರ್ನಾಮಕರಣಕ್ಕೆ ಬೆಂಬಲ ನೀಡಿದ್ದು ಮಾತ್ರವಲ್ಲದೆ ಮಂಗಳೂರು ವಿಮಾನ ನಿಲ್ಧಾಣಕ್ಕೆ ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ಎಂಬುದಾಗಿ  ನಾಮಕರಣ ಮಾಡಲು ಅನೇಕ ಗಣ್ಯರು, ರಾಜಕಾರಿಣಿಗಳು ಪಕ್ಷಬೇಧ ವಿಲ್ಲದೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಈ ಬಗ್ಗೆ ಸಮಿತಿಯು ಸೂಕ್ತ ಠರಾವು ವನ್ನು ಮಾಡಿದೆ. ಈಗಾಗಲೇ ಮಂಗಳೂರು ವಿಮಾನ ನಿಲ್ಧಾಣದ ಹೆಸರನ್ನು ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ಎಂಬುದಾಗಿ ಪುನರ್ ನಾಮಕರಣ ಮಾಡಲು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪರವಾಗಿ ಕೇಂದ್ರ ಸರಕಾರವನ್ನು ಸಂಪರ್ಕಿಸಲಾಗಿದೆ. ಈ ಬಗ್ಗೆ ಕಳೆದ ತಿಂಗಳ ಹಿಂದೆ ಪ್ರಧಾನ ಮಂತ್ರಿಯವರ ಕಾರ್ಯಾಲಯವು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ವ್ಯವಹಾರ ನಡೆಸಿದ್ದು ಅದರ ಪ್ರತಿಯನ್ನು ನಮಗೆ ಕಳುಹಿಸಿದ್ದಾರೆ. ಪ್ರಧಾನ ಮಂತ್ರಿಯವರ ಕಾರ್ಯಾಲಯದಿಂದ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಒಂದೂವರೆ ತಿಂಗಳ ಮೊದಲೇ ಪತ್ರ ಬರೆಯಲಾಗಿದ್ದು ಇದುವರೆಗೆ ಯಾವುದೇ ಕ್ರಮ ಕೈಕೊಳ್ಳದ ಕಾರಣ ನಾವು ಕರ್ನಾಟಕದ ಮುಖ್ಯ ಮಂತ್ರಿಗಳಾದ ಮಾನ್ಯ ಬಿ. ಎಸ್. ಯಡಿಯೂರಪ್ಪ ಮತ್ತು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು,  ಪ್ರಧಾನ ಮಂತ್ರಿಯವರ ಕಾರ್ಯಾಲಯದ ಪತ್ರದಂತೆ ಮಾನ್ಯ ಮುಖ್ಯ ಮಂತ್ರಿಯವರಲ್ಲಿ ಚರ್ಚಿಸಿ ಮಂಗಳೂರು ವಿಮಾನ ನಿಲ್ಧಾಣದ ಹೆಸರನ್ನು ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ಎಂಬುದಾಗಿ  ನಾಮಕರಣ ಮಾಡಲು  ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಲ್ಲಿ ವಿನಂತಿಸಲಾಗಿದ್ದು ಕೊರೋನಾ ಮುಗಿದಂತೆ ಮತ್ತೆ ಈ ಕಾರ್ಯವನ್ನು ಅಭಿಮಾನಿಗಳ ಸಹಕಾರದಿಂದ ನಾವು ಸ್ವತ: ಸರಕಾರವನ್ನು ಸಂಪರ್ಕಿಸಿಕೊಂಡು ಮುಂದುವರಿಸಲಿದ್ದೇವೆ, ಎಂದು ಜಯಕೃಷ್ಣ ಶೆಟ್ಟಿ ಯವರು ತಿಳಿಸಿದರು.
ಸಮಿತಿಯ ಮಾಜಿ ಅಧ್ಯಕ್ಷರುಗಳಾದ ನ್ಯಾ. ಪ್ರಕಾಶ್ ಎಲ್. ಶೆಟ್ಟಿ, ವಿಶ್ವನಾಥ ಮಾಡಾ, ಹರೀಶ್ ಕುಮಾರ್ ಶೆಟ್ಟಿ, ಧರ್ಮಪಾಲ್ ಯು. ದೇವಾಡಿಗ, ಉಪಾಧ್ಯಕ್ಷರುಗಳಾದ ಎಲ್  ವಿ  ಅಮೀನ್, ಸಿ ಎ  ಐ ಆರ್ ಶೆಟ್ಟಿ, ಪಿ .ಡಿ. ಶೆಟ್ಟಿ,  ಜಿ. ಟಿ. ಆಚಾರ್ಯ,ಬಂಟ್ಸ್ ಸಂಘ ಮುಂಬೈಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ ಶೆಟ್ಟಿ, ಬಂಟ್ಸ್ ಚೇಂಬರ್ ಆಪ್ ಕಾಮರ್ಸ್ ನ ಕಾರ್ಯಾಧ್ಯಕ್ಷ, . ಕೆ ಸಿ. ಶೆಟ್ಟಿ, ಬಿಲ್ಲವರ ಅಸೋಸಿಯೇಷನ್  ಮುಂಬಯಿ ನ  ಅಧ್ಯಕ್ಷರಾದ ಹರೀಶ್ ಅಮೀನ್, ವಿದ್ಯಾದಾಯಿನಿ  ಸಭಾದ ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ  ಎಮ್ .  ಕೋಟ್ಯಾನ್, ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ್ ಕುಲಾಲ್, , ಭಂಡಾರಿ ಸೇವಾ ಸಂಘ ಮುಂಬಯಿಯ ಅಧ್ಯಕ್ಷರಾದ ಅಡ್ವೋಕೇಟ್  ಆರ್ ಎಮ್ ಭಂಡಾರಿ, ದೇವಾಡಿಗ ಸಂಘ ಮುಂಬಯಿಯ ಅಧ್ಯಕ್ಷರಾದ ರವಿ ಎಸ್  ದೇವಾಡಿಗ, ಕನ್ನಡಿಗರ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷರಾದ ಡಾ. ಸುರೇಂದ್ರಕುಮಾರ್ ಹೆಗ್ಡೆ, ಸಮಿತಿಯ ಗೌರವ ಕಾರ್ಯದರ್ಶಿ ಪ್ರೊಫೆಸರ್  ಶಂಕರ್ ಉಡುಪಿ, ಸಮಿತಿಯ ವಕ್ತಾರ ಹಿರಿಯ ಪತ್ರಕರ್ತರಾದ ದಯಾಸಾಗರ ಚೌಟ, ಮಾಲತಿ ಮೊಯ್ಲಿ,  ಸುರೇಖಾ ದೇವಾಡಿಗ, ಕೇಶವ ಆಳ್ವ,  ದುಬೈಯ ಹಿರಿಯ ಉದ್ಯಮಿ ಫ್ರಾಂಕ್ ಫೆರ್ನಾಂಡಿಸ್ , ತೋನ್ಸೆ ಶೇಖರ ಗುಜ್ಜರಬೆಟ್ಟು, ಸಮಿತಿಯ ಗೌರವ ಕೋಶಾಧಿಕಾರಿ ಸುರೇಂದ್ರ ಸಾಲಿಯಾನ್
ಗೌರವ ಕಾರ್ಯದರ್ಶಿ ಹ್ಯಾರಿ ಸಿಕ್ವೆರ. ಮಾಜಿ ಗೌರವ ಕೋಶಾಧಿಕಾರಿ ಜಯಂತ್ ಕೆ. ಶೆಟ್ಟಿ, ರಂಜನಿ ಆರ್ ಮೊಯಿಲಿ, ವಿಠ್ಠಲ್ ಆಳ್ವ,ಈಶ್ವರ್ ಐಲ್,  ಮನೋರಂಜನ ಶೆಟ್ಟಿ, ಫ್ರೆಡ್ ಡಿಸೋಜಾ, ಎಂ ಎನ್ ಕರ್ಕೇರಾ ರ ವರು ವೆಬಿನಾರ್ ಸಭೆಯಲ್ಲಿ ಉಪಸ್ಥಿತರಿದ್ದು ಸಮಿತಿಯ ನಿರ್ಧಾರಕ್ಕೆ ಬೆಂಬಲ ವ್ಯಕ್ತ ಪಡಿಸಿದರು .
ಸಮಿತಿಯ ಉಪಾಧ್ಯಕ್ಷರೂ ಆದ  ನಿತ್ಯಾನಂದ ಡಿ. ಕೋಟ್ಯಾನ್ ರವರು  ಪ್ರಾರಂಭದಲ್ಲಿ ಮಾತನಾಡುತ್ತ ಸಮಿತಿಯ ಕಳೆದ ಎರಡು ಧಶಕಗಳಿಗೂ ಅಧಿಕ ಕಾಲದ ಕಾರ್ಯ ಸಾಧನೆಗಳಲ್ಲಿ ಜಾರ್ಜ್ ಫೆರ್ನಾಂಡಿಸ್ ರ ಮಾರ್ಗದರ್ಶನ ಮತ್ತು ಬೆಂಬಲದ  ಬಗ್ಗೆ ಸವಿಸ್ತಾರವಾಗಿ  ಮಾತನಾಡುತ್ತಾ ನಮ್ಮ ಜಿಲ್ಲೆಯಲ್ಲಿ ಹುಟ್ಟಿ ದೇಶದ ಒಬ್ಬ ಬಲಿಷ್ಠ ರಾಜಕಾರಣಿಯಾಗಿ. ಆದರ್ಶ ರಾಜಕೀಯ ಜೀವನವನ್ನು ಮಾಡಿದವರು ಅವರ ಹೆಸರು ದೇಶದಲ್ಲಿ ಶಾಶ್ವತವಾಗಿ ಉಳಿಯಬೇಕಾಗಿದೆ ಎಂದು ಅವರಿಗೆ ಗೌರವಾರ್ಪಣೆಗೈದರು.
ಸಭೆಯಲ್ಲಿ  ಉಪಸ್ಥಿತರಿದ್ದ ಸರ್ವ ಮುಖಂಡರು ಶ್ರೀ ಜಾರ್ಜ್ ಫೆರ್ನಾಂಡಿಸ್ ರ ಜೀವನ ಚರಿತ್ರೆ,  ಕಾರ್ಯಸಾಧನೆ,  ನಾಯಕತ್ವದ ಗುಣಗಳು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸುಪುತ್ರ, ದೇಶ ಕಂಡ  ಮಹಾನ್ ರಾಜಕಾರಿಣಿ, ಹಾಗೂ ಮರೆಯಲಾಗದ ದಿವ್ಯ ಚೇತನದ ಬಗ್ಗೆ ಮಾತನಾಡಿ ಗೌರವ ಸಲ್ಲಿಸಿದರು
ವರದಿ: ದಿನೇಶ್ ಕುಲಾಲ್

Related Posts

Leave a Reply

Your email address will not be published.