ನವದೆಹಲಿ: ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ ಖಾಸಗಿ ಶಾಲೆಗಳು ಮತ್ತು ಕ್ಷೇಮಾಭಿವೃದ್ಧಿ ಸಂಘಕ್ಕೆ ಗೌರವ

ಖಾಸಗಿ ಶಾಲೆಗಳು ಮತ್ತು ಕ್ಷೇಮಾಭಿವೃದ್ಧಿ ಸಂಘವು ಸಮಾಜ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದು, ಅತ್ಯುತ್ತಮ ಸಂಘವೆಂದು ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನವದೆಹಲಿಯ ನ್ಯೂ ಫ್ರೈಡ್ ಪ್ಲಾಜಾ ಹೋಟೆಲ್‌ನಲ್ಲಿ ಸಂಘವನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.

ಖಾಸಗಿ ಶಾಲೆಗಳು ಮತ್ತು ಕ್ಷೇಮಾಭಿವೃದ್ಧಿ ಸಂಘವು ಹಣಕಾಸಿನ ನೆರವು, ವೈದ್ಯಕೀಯ ಸಹಾಯ, ಆಹಾರ ಕಿಟ್‌ಗಳು, ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ವ್ಯವಸ್ಥೆ ಇತ್ಯಾದಿ ಅನೇಕ ಖಾಸಗಿ ಅನುದಾನರಹಿತ ಶಾಲಾ ಬೋಧನೆ ಮಾತ್ರವಲ್ಲದೆ ಪಿಎಸ್‌ಎಸಿಡಬ್ಲ್ಯೂಎ ಕರ್ನಾಟಕವು ಖಾಸಗಿ ಅನುದಾನರಹಿತ ಶಾಲೆಗಳ ಪರವಾಗಿ ಕೆಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ವಿರುದ್ಧದ ಅನೇಕ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದೆ. ಇವೆಲ್ಲವನ್ನು ಗುರುತಿಸಿ ಸಂಘವನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಘವನ್ನು ಖಾಸಗಿ ಶಾಲೆಗಳು ಮತ್ತು ಮಕ್ಕಳ ಕಲ್ಯಾಣ ಸಂಘ ಭಾರತದ ರಾಷ್ಟ್ರೀಯ ಅಧ್ಯಕ್ಷರಾದ ಸೈಯ್ಯದ್ ಶಾಮೇಲ್ ಅಹಮ್ಮದ್, ಸಿಕ್ಕಿಂ ರಾಜ್ಯಪಾಲ ಗಂಗಾ ಪ್ರಸಾದ್, ಕರ್ನಾಟಕದ ರಾಜ್ಯ ಅಧ್ಯಕ್ಷ ಡಾ. ಆಶ್ಫದ್ ಅಹಮ್ಮದ್ ಅವರು ಉಪಸ್ಥಿತರಿದ್ದರು,ತಂಡವನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಇಸ್ಲಾಂನ ಉಪಾಧ್ಯಕ್ಷರಾದ ನಜ್ಮುಲ್ ಅಹ್ಮರ್, ರಾಜ್ಯ ಕಾರ್ಯದರ್ಶಿ ಬೇಬಿ ಆಯಿಶಾ ಶೇಖ್, ರಶ್ಮಿ ರಾಣಿ ಮತ್ತು ಜ್ಯೋತಿ, ಜಂಟಿ ಕಾರ್ಯದರ್ಶಿ ಸವಿತಾ ಪಾಟೀಲ್, ಗುಲ್ಬಾರ್ಗ ಘಟಕದ ಸಲಹೆಗಾರ ಅಬ್ದುಲ್ ನಜೀಬ್, ಎಐಸಿಸಿಯ ಜನರಲ್ ಕಾರ್ಯದರ್ಶಿ ತಾರೀಕ್ ಅನ್ವರ್, ಜಾರ್ಖಾಂಡ್ ಸರ್ಕಾರದ ಹಣಕಾಸು ಸಚಿವರಾದ ಶ್ರೀ ರಾಮೇಶ್ವರ ಒರಮ್, ಬಿಹಾರ ಕೈಗಾರಿಕಾ ಸಚಿವ ಶಾನವಾಜ್ ಹುಸೇನ್, ಐಎಎಸ್ ಜಂಟಿ ಕಾರ್ಯದರ್ಶಿ ಎಚ್‌ಆರ್‌ಡಿ ಮಂತ್ರಿ ಸಂತೋಷ್ ಸಾರಂಗಿ, ಬಾಲಿವುಡ್ ಗಾಯಕ ಅನೂಪ್ ಜಲೋಟಾ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Related Posts

Leave a Reply

Your email address will not be published.