ಸೆ.10 ರಂದು ಬಿ.ಸಿ.ಸಿ.ಐ(ಯು.ಎ.ಯಿ) ವತಿಯಿಂದ ‘ಡಿಜಿಟಲ್ ರೆವಲ್ಯೂಶನ್’ ವೆಬಿನಾರ್

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ) ಯುಎಇ ವತಿಯಿಂದ ಸೆಪ್ಟೆಂಬರ್ 10ರಂದು ‘ಡಿಜಿಟಲ್ ರೆವಲ್ಯೂಶನ್ ಆನ್ ಬ್ಯುಸಿನೆಸ್ ಆಂಡ್ ಎಂಟ್ರಪನರ್’ಶಿಪ್’ ಎಂಬ ವಿಷಯದಲ್ಲಿ ವೆಬಿನಾರ್ ಹಮ್ಮಿಕೊಂಡಿದೆ.

ಬ್ಯುಸಿನೆಸ್ ನೆಟ್ವರ್ಕಿಂಗ್ ಮೂಲಕ ಸಮಾಜದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಆ ಮೂಲಕ ವ್ಯಾಪಾರ ಸಬಲೀಕರಣ ಹಾಗೂ ಸಮಾಜ ಸೇವೆ ನಡೆಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಯುಎಇಯಲ್ಲಿ ಸಕ್ರಿಯವಾಗಿರುವ ಬಿಸಿಸಿಐ ಯುಎಇ ಚಾಪ್ಟರ್, ಯುವ ಉದ್ಯಮಿಗಳ ಹಾಗೂ ವೃತ್ತಿಪರರ ಆಸಕ್ತಿದಾಯಕ ವಿಷಯವಾದ ‘ಡಿಜಿಟಲ್ ರೆವಲ್ಯೂಶನ್ ಆನ್ ಬ್ಯುಸಿನೆಸ್ ಆಂಡ್ ಎಂಟ್ರಪನರ್’ಶಿಪ್’ ಕುರಿತು ಆನ್ಲೈನ್ ವೆಬಿನಾರ್ ಹಮ್ಮಿಕೊಂಡಿದೆ ಎಂದು ಬ್ಯಾರೀಸ್ ಚೇಂಬರ್ಸ್ ಯುಎಇ ಚಾಪ್ಟರ್’ನ ಪತ್ರಿಕಾ ಪ್ರಕಟಣೆಯಲ್ಲಿ ಅಧ್ಯಕ್ಷ ಎಸ್.ಎಂ ಬಶೀರ್ ತಿಳಿಸಿದ್ದಾರೆ.

ದುಬೈ ಸರ್ಕಾರದ ಎಕೋನಮಿಕ್ ಡೆವಲಪ್ಮೆಂಟ್ ವಿಭಾಗದ ಮುಖ್ಯ ತಂತ್ರಜ್ಞರಾದ ರಾಶಿದ್ ಹಜಾರಿಯವರು ಡಿಜಿಟಲ್ ಮಾಧ್ಯಮವು ಉದ್ಯಮರಂಗದಲ್ಲಿ ಸೃಷ್ಟಿಸಿದ ಹೊಸ ಸಂಚಲನದ ಬಗ್ಗೆ ಉಪಯುಕ್ತ ಮಾಹಿತಿಯನ್ನು ವೆಬಿನಾರ್ ಮೂಲಕ ನೀಡಲಿದ್ದು, ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದು ಎಂದು ಬಿಸಿಸಿಐ ಯುಎಇ ಚಾಪ್ಟರ್ ಪ್ರಕಟನೆಯಲ್ಲಿ ತಿಳಿಸಿದೆ.

Related Posts

Leave a Reply

Your email address will not be published.