ಪಡುಬಿದ್ರಿಯಲ್ಲಿ ತೀವ್ರಗೊಂಡ ಕಡಲು ಕೊರೆತ

ಪಡುಬಿದ್ರಿ ಕಾಡಿಪಟ್ಣ ಪ್ರದೇಶದಲ್ಲಿ ಕಡಲು ಕೊರೆತ ತೀವ್ರ ಗೊಂಡಿದ್ದು ಈ ಪ್ರದೇಶದ ಹತ್ತಾರು ತೆಂಗಿನ ಮರಗಳು ಸಹಿತ ಪ್ರವಾಸೋದ್ಯಮ ಇಲಾಖೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಕಾಮಗಾರಿ ಕಡಲ ಒಡಲು ಸೇರಲು ಸನ್ನದ್ಧ ವಾಗಿದೆ.


ಸ್ಥಳೀಯರ ಮಾತಿನ ಪ್ರಕಾರ ತಡೆಗೋಡೆ ನಿರ್ಮಾಣ ಪ್ರದೇಶದ ತೀರದಲ್ಲಿ ಕಡಲು ಕೊರೆತ ಸರ್ವೇಸಾಮಾನ್ಯ, ಇದೀಗ ಪಕ್ಕದಲ್ಲಿ ಬಂಡೆ ಕಲ್ಲುಗಳಿಂದ ತಡೆಗೋಡೆ ನಿರ್ಮಾಣವಾಗಿದ್ದು ಈ ಭಾಗದಲ್ಲೂ ತಡೆಗೋಡೆ ನಿರ್ಮಿಸುವಂತೆ ಈ ಭಾಗದ ಶಾಸಕರ ಗಮನಕ್ಕೆ ತರಲಾಗಿದೆ. ಇಲ್ಲಿ ತಡೆಗೋಡೆ ನಿರ್ಮಾಣ ವಿಳಂಬವಾದರೆ ಬಹಳಷ್ಟು ನಷ್ಟ ಸಂಭವಿಸುವ ಸಾಧ್ಯತೆ ಇದೆ ಎನ್ನುತ್ತಾರೆ. ಅದರಲ್ಲೂ ನಾಳೆದಿನ ಹುಣ್ಣಿಮೆ ಯಾದ ಕಾರಣ ಕಡಲು ಮತ್ತಷ್ಟು ಬಿರುಸುಗೊಳ್ಳುತ್ತಿದ್ದು ಈ ಭಾಗದ ಬಹುತೇಕ ತೆಂಗಿನ ಮರಗಳು ಕಡಲ ಪಾಲಗಲಿದೆ ಎನ್ನುತ್ತಾರೆ ಮಾಜಿ ಜಿ.ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ.

Related Posts

Leave a Reply

Your email address will not be published. Required fields are marked *

How Can We Help You?