ಶ್ರೀನಿವಾಸ್‌ ವಿಶ್ವವಿದ್ಯಾಲಯ: ಲಸಿಕೆ ಶಿಬಿರ

ನಗರದ ಶ್ರೀನಿವಾಸ್‌ ವಿಶ್ವವಿದ್ಯಾಲಯದ, ಸಿಟಿ ಕ್ಯಾಂಪಸ್‌ ಪಾಂಡೇಶ್ವರದಲ್ಲಿ ದ.ಕ. ಜಿಲ್ಲಾ ಆರೋಗ್ಯ ಕೇಂದ್ರ, ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ, ಕ್ಯಾಂಪಸ್‌ನ ವಿದ್ಯಾರ್ಥಿಗಳು, ಶಿಕ್ಷಕರು, ಭೋದಕೇತರ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಗೆ ಕೋವಿಡ್‌ ಲಸಿಕೆ ನೀಡುವ ಶಿಬಿರವು ಸೆ. 17 ರ ಶುಕ್ರವಾರದಂದು ಜರಗಿತು.

ಶ್ರೀನಿವಾಸ್‌ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್.‌ ಐತಾಳ್‌ ಕೋವಿಡ್‌ ವಾರಿಯರ್ಸ್‌ಗಳನ್ನು ಈ ಸಂದರ್ಭ ಅಭಿನಂದಿಸಿದರು. ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಸುಜಯ್‌, ಜ್ಯೋತಿ, ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರದ ವಿಜಯ್‌, ವಿದ್ಯಾ, ಅರ್ಚನಾ, ಧನ್ಯಾ ಹಾಗೂ ಡೇಟಾ ಎಂಟ್ರಿ ಸಿಬ್ಬಂದಿಗಳಾದ ಉಜ್ವಲ್‌, ಆಕಾಶ್, ಶ್ರೀನಿವಾಸ್ ಯೂನಿವರ್ಸಿಟಿಯ ಚೀಫ್ ಮೆಡಿಕಲ್ ಆಫೀಸರ್ ಹಾಗೂ ಪ್ರಸ್ತುತ ವೆನ್ಲೋಕ್ ಜಿಲ್ಲಾ ಆಸ್ಪತ್ರೆಯ ಕೋವಿಡ್ ಚೀಫ್ ಮೆಡಿಕಲ್ ನೋಡಲ್, & ಸಾರ್ವಜನಿಕ ಸಂಪರ್ಕ ವೈದ್ಯಾಧಿಕಾರಿ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು, ಕಾಲೇಜಿನ ನೋಡಲ್‌ ಅಧಿಕಾರಿ ಪ್ರೊ. ನೆಲ್ಸನ್‌ ಪಿರೇರಾ, ವಿವಿಧ ಕಾಲೇಜಿನ ಡೀನ್‌ಗಳು, ಭೋದಕ – ಭೋದಕೇತರ ಸಿಬ್ಬಂಧಿಗಳು, ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *

How Can We Help You?