ಆಗ್ನೇಯ ಆಸ್ಟ್ರೇಲಿಯಾದಲ್ಲಿ ಭೂಕಂಪ

ಆಗ್ನೇಯ ಆಸ್ಟ್ರೇಲಿಯಾದಲ್ಲಿ ಇಂದು ಮುಂಜಾನೆ ಭೂಕಂಪ ಸಂಭವಿಸಿದ್ದು, ಭೂಕಂಪದಿಂದಾಗಿ ಕಟ್ಟಡಗಳು ಅಲುಗಾಡಿದ್ದು, ಗೋಡೆಗಳು ಉರುಳಿ ಬಿದ್ದವು ಹಾಗೂ ಗಾಬರಿಗೊಂಡ ನಿವಾಸಿಗಳು ಮೆಲ್ಬೋರ್ನ್‌ನ ರಸ್ತೆಗಳತ್ತ ಓಡಿದ್ದಾರೆ. ದೇಶದ ಎರಡನೇ ಅತ್ಯಂತ ದೊಡ್ಡ ನಗರ ಮೆಲ್ಬೋರ್ನ್ ಪೂರ್ವಕ್ಕೆ ಸ್ಥಳೀಯ ಸಮಯ 9.15 ಗಂಟೆ ಸಂದರ್ಭದಲ್ಲಿ ಭೂ ಕಂಪನ ಸಂಭವಿಸಿದೆ.

ಅಮೆರಿಕದ ಜಿಯಾಲಾಜಿಕಲ್ ಸರ್ವೇ ಕಂಪನಿಯು ಭೂಕಂಪದ ಪ್ರಮಾಣವನ್ನು 5.8 ರಷ್ಟಿತ್ತು ಎಂದಿದೆ. ನಂತರ ಅದನ್ನು 5.9 ಕ್ಕೆ ಪರಿಷ್ಕರಿಸಲಾಯಿತು. ಭೂಕಂಪನವು 10 ಕಿಲೋಮೀಟರ್ (ಆರು ಮೈಲಿ) ಆಳದಲ್ಲಿ ಅಪ್ಪಳಿಸಿತು ಎಂದು ಜಿಯಾಲಾಜಿಕಲ್ ಸರ್ವೇ ತಿಳಿಸಿದೆ.

ಮೆಲ್ಬೋರ್ನ್ ನ ಚಾಪೆಲ್ ಸ್ಟ್ರೀಟ್ ಸುತ್ತಮುತ್ತಲಿನ ಜನಪ್ರಿಯ ಶಾಪಿಂಗ್ ಪ್ರದೇಶದಲ್ಲಿ ಕಸಕಡ್ಡಿಗಳು ಬಿದ್ದಿದ್ದು, ಕಟ್ಟಡಗಳಿಂದ ಇಟ್ಟಿಗೆಗಳು ಸಡಿಲವಾಗಿ ಹೊರ ಬರುತ್ತಿವೆ. ಇಡೀ ಬಿಲ್ಡಿಂಗ್‌ಗಳು ಅಲುಗಾಡಿದ್ದು, ತಕ್ಷಣವೇ ಎಲ್ಲರೂ ಓಡಿ ಹೊರಬಂದಿದ್ದಾರೆ.

 

 

Related Posts

Leave a Reply

Your email address will not be published. Required fields are marked *

How Can We Help You?