ಮಹಿಳಾ ಹೋಂ ಗಾರ್ಡ್ ಕರ್ತವ್ಯಕ್ಕೆ ಅಡ್ಡಿ:ಇಬ್ಬರ ಬಂಧನ

ಉಳ್ಳಾಲ: ನಾಗುರಿ ಸಂಚಾರಿ ಠಾಣೆಯ ಕರ್ತವ್ಯ ನಿರ್ವಹಿಸುತ್ತಿದ್ದ ಲೇಡಿ ಹೋಂ ಗಾರ್ಡ್‍ಗೆ ಅಶ್ಲೀಲ ಹಾಗೂ ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ತೊಕ್ಕೊಟ್ಟು ಕಾಪಿಕಾಡು ಎಂಬಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಇಬ್ಬರನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಹಳೇಕೋಟೆ ನಿವಾಸಿ ಮಹಮ್ಮದ್ ಹಾಸೀರ್ ಮತ್ತು ನಯೀಮ್ ಬಂಧಿತರು. ಇಬ್ಬರು ಕಾಲೇಜು ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ಸೆ.25 ರಂದು ಉಳ್ಳಾಲದಿಂದ ಕಾಪಿಕಾಡುವಿಗೆ ರಾ.ಹೆ 66 ರಲ್ಲಿ ವಿರುದ್ಧ ಧಿಕ್ಕಿನಲ್ಲಿ ಬೈಕಿನಲ್ಲಿ ಬರುತ್ತಿರುವುದನ್ನು ಗಮನಿಸಿದ ಮಹಿಳಾ ಹೋಂ ಗಾರ್ಡ್ ಮೊಬೈಲ್ ಮೂಲಕ ಫೋಟೊ ಕ್ಲಿಕ್ಕಿಸಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಯುವಕರು ಮರ್ಮಾಂಗಕ್ಕೆ ತುಳಿಯುವುದಲ್ಲದೆ, ಅವಾಚ್ಯವಾಗಿ ನಿಂದಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಮಹಿಳಾ ಹೋಂ ಗಾರ್ಡ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದು ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

Related Posts

Leave a Reply

Your email address will not be published. Required fields are marked *

How Can We Help You?