ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಫಾಹಿಮಾ ಇಂಟರ್‌ನ್ಯಾಷನಲ್ ವತಿಯಿಂದ ಸನ್ಮಾನ

ಹಾಜಬ್ಬರಿಗೆ ಉಚಿತ ಉಮ್ರಾ ನಿರ್ವಹಣೆಗೆ ಅವಕಾಶ ನೀಡಿದ ಫಾಹಿಮಾ ಇಂಟರ್‍ನ್ಯಾಷನಲ್ ಇಂದು ಹರೇಕಳದ ಹಾಜಬ್ಬನವರ ಶಾಲೆಯಲ್ಲಿ ವಿವಿಧ ಸಂಘಸಂಸ್ಥೆಗಳು ಅವರನ್ನು ವಿವಿಧ ರೀತಿಯಲ್ಲಿ ಸನ್ಮಾನಿಸಿತ್ತು. ಆದರೆ ದೇರಳಕಟ್ಟೆಯ ಫಾಹಿಮಾ ಇಂಟರ್‍ನ್ಯಾಷನಲ್ ನವರು ಹಾಜಬ್ಬನವರಿಗೆ ಉಚಿತವಾಗಿ ಉಮ್ರಾ ನಿರ್ವಹಣೆಗೆ ಅವಕಾಶ ಒದಗಿಸುವ ಭರವಸೆಯನ್ನು ನೀಡಿದೆ. ಈ ಕುರಿತಾದ ಪತ್ರವನ್ನು ಸಂಸ್ಥೆಯ ನಿರ್ದೇಶಕ ಕಲಂದರ್, ಮ್ಯಾನೇಜರ್ ಅಝೀಝ್ ಝುಹ್‌ರಿ ಇಂದು ಅವರಿಗೆ ಹಸ್ತಾಂತರಿಸಿದರು.
ಕೋವಿಡ್ ಕಾರಣದಿಂದಾಗಿ ಭಾರತೀಯರಿಗೆ ಹಜ್ ಮತ್ತು ಉಮ್ರಾ ನಿರ್ವಹಣೆಗೆ ಸೌದಿ ಅರೇಬಿಯಾ ಸರಕಾರವು ನಿರ್ಬಂಧ ವಿಧಿಸಿದ್ದು, ನಿರ್ಬಂಧ ತೆರವಾದ ಕೂಡಲೇ ಮೊದಲ ಬ್ಯಾಚ್‌ನಲ್ಲಿ ಅವರನ್ನು ಉಮ್ರಾ ನಿರ್ವಹಣೆಗೆ ಕಳುಹಿಸಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.

Related Posts

Leave a Reply

Your email address will not be published. Required fields are marked *

How Can We Help You?