ಮೂಡುಬಿದರೆ : ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ : ಕೂಲಿ ಕಾರ್ಮಿಕ ವ್ಯಕ್ತಿಯೋರ್ವರು ತಾನು ಕೆಲಸ ಮಾಡಿಕೊಂಡಿದ್ದ ಯಜಮಾನರ ಜಾಗದಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಂಕಮಿಜಾರು ಗ್ರಾ.ಪಂ.ವ್ಯಾಪ್ತಿಯ ಪಂಜುರ್ಲಿಗುಡ್ಡೆಯಲ್ಲಿ ನಡೆದಿದೆ.

ಪಂಜುರ್ಲಿಗುಡ್ಡೆ ನಿವಾಸಿ ರಾಮ ಗೌಡ ಅವರ ಪುತ್ರ ಸದಾನಂದ ಗೌಡ(47) ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಕಿಜನಬೆಟ್ಟು ಎಂಬಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಸದಾನಂದ ಅವರು ಅಲ್ಲಿಯೇ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಮಂಗಳವಾರ ಬೆಳಿಗ್ಗೆ ತಿಳಿದು ಬಂದಿದೆ.ಕಳೆದೆರಡು ದಿನಗಳಿಂದ ಮಾನಸಿಕವಾಗಿ ನೊಂದಿದ್ದರೆನ್ನಲಾಗಿದೆ.ಪತ್ನಿ ಮತ್ತು ಮೂವರು ಮಕ್ಕಳನ್ನು ಅವರು ಹೊಂದಿದ್ದರು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *

How Can We Help You?