ಸುಲ್ತಾನ್ ಬತ್ತೇರಿ ಬೀಚ್ ಮೈದಾನದಲ್ಲಿ ಹೊನಲುಬೆಳಕಿನ ಕಬಡ್ಡಿ ಪಂದ್ಯಾಟ : ಸಿಪಿಎಲ್ ಸೀಸನ್-3 ಗ್ರ್ಯಾಂಡ್ ಫಿನಾಲೆ

ಡಲ ನಗರಿ ಕರಾವಳಿಯಲ್ಲಿ ಜಿಲ್ಲಾ ಮಟ್ಟದ ಪುರುಷರ ಪ್ರೋ ಕಬಡ್ಡಿಗೆ ಅಖಾಡ ಸಿದ್ಧವಾಗುತ್ತಿದೆ. ಜನವರಿ 8ರಂದು ಸುಲ್ತಾನ್ ಬತ್ತೇರಿ ಬೀಚ್ ಮೈದಾನದಲ್ಲಿ ಪ್ರೊ ಕಬಡ್ಡಿ ಟೂರ್ನಮೆಂಟ್ ನಡೆಯಲಿದ್ದು, 16 ತಂಡಗಳು ಈ ಟೂರ್ನಮೆಂಟ್‍ನಲ್ಲಿ ಸೆಣೆಸಾಡಲಿದೆ. ಇದರ ಜೊತೆಗೆ ಜನವರಿ 9ರಂದು ವಿ4 ನ್ಯೂಸ್ ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಕಾಮಿಡಿ ಪ್ರೀಮಿಯರ್ ಲೀಗ್-ಸೀಸನ್-3 ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆಯಲಿದೆ.

ಸುಲ್ತಾನ್ ಬತ್ತೇರಿ ಪ್ರಕೃತಿ ರಮಣೀಯ ಪ್ರವಾಸಿ ಸ್ಥಳವಾಗಿದೆ. ಇದೊಂದು ಮಾದರಿ ತಾಣವಾಗಿದ್ದು, ದೊಡ್ಡ ಐತಿಹಾಸಿಕ ಹಿನ್ನಲೆಯೂ ಸೇರಿಕೊಂಡಿದೆ. ಅಂತಹ ಒಂದು ಪ್ರದೇಶದಲ್ಲಿ ಜಿಲ್ಲಾ ಮಟ್ಟದ ಪ್ರೊ ಕಬಡ್ಡಿ ಮತ್ತು ವಿ4 ನ್ಯೂಸ್ ಕರ್ನಾಟಕದ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-3 ಅದ್ಧೂರಿಯಾಗಿ ನಡೆಯಲಿದ್ದು ಇದಕ್ಕಾಗಿ ವೇದಿಕೆ ಸಿದ್ಧಗೊಳ್ಳುತ್ತಿದೆ.

ಬತ್ತೇರಿ ಫ್ರೆಂಡ್ಸ್, ಬೋಳೂರು(ರಿ) ಕ್ಲಬ್ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡು ಅಸೋಸಿಯೇಶನ್ ಮತ್ತು ಮಂಗಳೂರು ತಾಲೂಕು ಸಿಟಿ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಪ್ರೊ ಕಬಡ್ಡಿ ಜನವರಿ 8ರಂದು ಅದ್ಧೂರಿಯಾಗಿ ನಡೆಯಲಿದೆ. ಇದಕ್ಕೆ ಈಗಾಗಲೇ ಅಖಾಡದ ಸಿದ್ಧತೆ ನಡೆಯುತ್ತಿದೆ. ಮಂಗಳೂರು ನಗರದ ಸುಂದರ ಪರಿಸರವಾದ ಸುಲ್ತಾನ್ ಬತ್ತೇರಿಯ ಬೀಚ್ ಮೈದಾನದಲ್ಲಿ ಹೊನಲು ಬೆಳಕಿನ ಪ್ರೊ ಕಬಡ್ಡಿ ಟೂರ್ನಮೆಂಟ್ ನಡೆಯಲಿದೆ. ಇದರೆ ಜೊತೆಗೆ ಅಂದರೆ ಜನವರಿ 9ರ ಭಾನುವಾರದಂದು ಸಂಜೆ 6 ಗಂಟೆಗೆ ವಿ4 ನ್ಯೂಸ್ ಕರ್ನಾಟಕದ ಜನಪ್ರೀಯ ರಿಯಾಲಿಟಿ ಶೋ ಕಾಮಿಡಿ ಪ್ರೀಯರ್ ಲೀಗ್‍ನ ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

ಬತ್ತೇರಿ ಫ್ರೆಂಡ್ಸ್, ಬೋಳೂರು(ರಿ) ಕಳೆದ ಎಂಟು ವರ್ಷಗಳಿಂದ ಮನೋರಂಜನಾ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದ್ದು, ಇದೀಗ 8ನೇ ವರ್ಷದ ಪ್ರಯುಕ್ತ ಪ್ರೊ ಕಬಡ್ಡಿ ಆಯೋಜನೆ ಮಾಡುತ್ತಿದ್ದಾರೆ. ಒಟ್ಟು 16 ತಂಡಗಳು ಈ ಟೂರ್ನಮೆಂಟ್‍ನಲ್ಲಿ ಸೆಣೆಸಾಡಲಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಕಬಡ್ಡಿ ಪಟುಗಳು ಆಗಮಿಸಲಿದ್ದಾರೆ. ಹೊನಲು ಬೆಳಕಿನ ಈ ಪಂದ್ಯಾಟದಲ್ಲಿ ಫಿನಾಲೆ ಹಣಾಹಣಿಯು ನಡೆಯಲಿದೆ ಎಂದು ಬತ್ತೇರಿ ಫ್ರೆಂಡ್ಸ್, ಬೋಳೂರು(ರಿ) ಇದರ ಸದಸ್ಯರಾದ ಗಿರೀಶ್ ಅವರು ಹೇಳಿದರು.

ವಿ4 ನ್ಯೂಸ್ ಕರ್ನಾಟಕದ ಜನಪ್ರಿಯ ಕಾಮಿಡಿ ಶೋ ಸೀಸನ್-3 ಇದರ ಗ್ರ್ಯಾಂಡ್ ಫಿನಾಲೆ ಜನವರಿ 9ರಂದು ಸಂಜೆ 6 ಗಂಟೆಗೆ ನಡೆಯಲಿದ್ದು, ಎಂಟು ತಂಡಗಳು ರಿಯಾಲಿಟಿ ಶೋದಲ್ಲಿ ಭಾಗವಹಿಸಲಿದ್ದು, ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದ್ದಾರೆ.

Related Posts

Leave a Reply

Your email address will not be published.

How Can We Help You?