ಮಹಿಳೆಯರ 100 ಮೀ ಓಟದಲ್ಲಿ ಆಳ್ವಾಸ್ ನವಮಿ ಕೂಟ ದಾಖಲೆ

 ಮೂಡುಬಿದಿರೆ:ಸ್ವರಾಜ್ಯ ಮೈದಾನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುತ್ತಿರುವ ಮಂಗಳೂರು ವಿವಿ ಅಂತರ್ ಕಾಲೇಜು ಕ್ರೀಡಾಕೂಟದ ಎರಡನೇ ದಿನವಾದ ಬುಧವಾರ ಆಳ್ವಾಸ್ ವಿದ್ಯಾರ್ಥಿಗಳಿಂದ 5 ಕೂಟದಾಖಲೆ ನಿರ್ಮಾಣವಾಗಿದೆ.

ಪುರುಷರ 5,000ಮೀ ಓಟದಲ್ಲಿ ಆಳ್ವಾಸ್‍ನ ಅದೇಶ್ 14:14.5ಸೆ ಅಂತರದಲ್ಲಿ ಗುರಿಮುಟ್ಟಿ ಆಳ್ವಾಸ್ ಕಾಲೇಜಿನ ರಾಬಿನ್ ಸಿಂಗ್ (14:48.3ಸೆ)ಹಳೆ ದಾಖಲೆಯನ್ನು ಮುರಿದರು. ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ಆಳ್ವಾಸ್‍ನ ಶಾಲಿನಿ ಚೌಧರಿ 45.97ಮೀ ದೂರ ಎಸೆಯುವ ಮೂಲಕ ಇದೇ ಕಾಲೇಜಿನ ನಿಧಿ ರಾಣಿ  ಹೆಸರಿನಲ್ಲಿದ್ದ (45.59ಮೀ) ದಾಖಲೆಯನ್ನು ಅಳಿಸಿದ್ದಾರೆ. ಮಹಿಳೆಯರ 100ಮೀ ಓಟದಲ್ಲಿ ಆಳ್ವಾಸ್‍ನ ನವಮಿ 11.7ಸೆ ನಲ್ಲಿ ಗುರಿ ತಲುಪುವ ಮೂಲಕ ಈ ಹಿಂದೆ 2014ರಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ  ಪ್ರಿಯಾಂಕ ಕಳಜಿ (11.8ಸೆ) ದಾಖಲೆಯನ್ನು ಮುರಿದಿದ್ದಾರೆ.  ಜಾವೆಲಿನ್ ಥ್ರೊನಲ್ಲಿ ಆಳ್ವಾಸ್ ಕಾಲೇಜಿನ ಕರಿಷ್ಮಾ ಸನಿಲ್ 50.90ಮೀ ದೂರ  ಎಸೆದು ಆಳ್ವಾಸ್‍ನ ರಶ್ಮಿ ಕೆ (47.30ಮೀ) ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಮಹಿಳೆಯರ 400ಮೀ ವಿಭಾಗದಲ್ಲಿ ಇದೇ ಕಾಲೇಜಿನ ಲಿಖಿತಾ 53.7ಸೆನಲ್ಲಿ ಗುರು ತಲುಪುವ ಮೂಲಕ 2011-12ರಲ್ಲಿ ಪೂವಮ್ಮ ಎಮ್. ಆರ್ ಅವರ 55.3ಸೆ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಎರಡನೇ ದಿನದ ಅಂತ್ಯಕ್ಕೆ ಆಳ್ವಾಸ್ ಕಾಲೇಜು 252 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದರೆ, ಉಜಿರೆಯ ಎಸ್‍ಡಿಎಂ ಕಾಲೇಜು 57 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಕೂಟ ದಾಖಲೆ ನಿರ್ಮಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಲಾ 5 ಸಾವಿರ ನಗದು ಪುರಸ್ಕಾರ ನೀಡಿದರು. 

Related Posts

Leave a Reply

Your email address will not be published.

How Can We Help You?