ಬೈಕ್ ಯಾನ ಮುಗಿಸಿ ವಾಪಾಸ್ಸಾದ ಆಶೀಶ್ ಶೆಟ್ಟಿ ಮತ್ತು ಜೀತ್ ರವರಿಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ

ಮಂಗಳೂರಿನ ಎ.ಜೆ.ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಆಶೀಶ್ ಶೆಟ್ಟಿ ಹಾಗೂ ಕರಾವಳಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಜೀತ್ ಅವರು ಮಂಗಳೂರಿನಿಂದ ಲೇಹ್ ಲಡಾಕ್ ಗೆ ಬೈಕ್ ಯಾನ ತೆರಳಿದ್ದು, ಇದೀಗ 21ದಿನಗಳ ಪ್ರವಾಸ ಮುಗಿಸಿ ವಾಪಾಸ್ ಮಂಗಳೂರಿಗೆ ತಲುಪಿದ್ದಾರೆ.

ಮನಹಳ್ಳಿ, ಲಕಾಡ್, ಹಿಮಾಚಲ ಪ್ರದೇಶ, ಶಿಮ್ಲ ಸೇರಿದಂತೆ ಉತ್ತರಕಾಂಡ ಪ್ರವಾಸ ಮುಗಿಸಿ ಸುಮಾರು 21 ದಿನಗಳ ಕಾಲ ಬೈಕ್ ಯಾನ ಮಾಡಿ ಮತ್ತೆ ಮಂಗಳೂರಿಗೆ ತಲುಪಿದ್ದಾರೆ. ಇವರನ್ನು ಆಶೀಶ್ ಶೆಟ್ಟಿರವರ ತಂದೆ ತಾಯಿಯಾದ ಶಿವಾನಂದ ಶೆಟ್ಟಿ ಹಾಗೂ ಆಶಾ ಶೆಟ್ಟಿ ಅತ್ತಾವರ, ಜೀತ್ ರವರ ತಂದೆ ತಾಯಿಯಾದ ಎಲೆಂಜಿನಾ ಪ್ರಭು ಹಾಗೂ ವೇದಾ ಟಿ.ಸಿ.ಪ್ರಭು ಅವರು ಹೂವಿನ ಮಾಲೆ ಹಾಕಿ, ಆರತಿ ಮಾಡಿ ಸ್ವಾಗತಿಸಿದರು. ಇನ್ನು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಹೂವಿನ ಮಾಲೆ ಹಾಕಿ ಶುಭಾಶಯವನ್ನು ತಿಳಿಸಿದರು.

ವಿದ್ಯಾರ್ಥಿ ಯುವಜನರಲ್ಲಿ ಸಾಹಸ ಯಾನ ಮತ್ತು ಫಿಟ್ನೆಸ್ ಹಾಗೂ ದುಷ್ಚಟ ಮುಕ್ತ ಸಮಾಜದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಈ ಸಾಹಸ ಪ್ರಯಾಣದ ಆಶಯವಾಗಿತ್ತು ಎಂದು ಆಶೀಶ್ ಶೆಟ್ಟಿ ಹಾಗೂ ಜೀತ್ ಅವರು ತಿಳಿಸಿದರು.

ದೇವದಾಸ್ ಶೆಟ್ಟಿ ಅತ್ತಾವರ, ಮೀನಾಕ್ಷಿ ಶೆಟ್ಟಿ ಅತ್ತಾವರ, ನಾಗವೇಣಿ ಶೆಟ್ಟಿ,ಶ್ಯಾಮಲ ಶೆಟ್ಟಿ, ಕಾಲೇಜು ಸ್ನೇಹಿತರಾದ ಜಗತ್,ರಂಜಿತ್,ಸ್ವಸ್ತಿಕ್, ಚೇತನ್, ಚರಣ್, ಸಾರ್ಥಕ್, ಸೃಜನ್, ಸ್ವರ್ಣಲತಾ ,ಅನುಷ್ಕಾ, ಇಂದಿರಾಕ್ಷಿ, ವೇದಾ, ಉಮಾ, ಶ್ಯಾಮಲ ಶೆಟ್ಟಿ, ಯಶ್ವಿತ, ರಿತೇಶ್,ನಂದಿನಿ ಮತ್ತಿತರರು ಇವರನ್ನು ಅಭಿಮಾನದಿಂದ ಬರಮಾಡಿಕೊಂಡರು.

Related Posts

Leave a Reply

Your email address will not be published.

How Can We Help You?