ಮನಪಾ ಬಜೆಟ್ ನಲ್ಲಿ ತೆರಿಗೆ ಹೆಚ್ಚಳ ಮಾಡುವ ಚಿಂತನೆಯಿಲ್ಲ : ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ

ಮಂಗಳೂರು ಮಹಾನಗರ ಪಾಲಿಕೆಯ ಈ ಬಾರಿಯ ಬಜೆಟ್‍ನಲ್ಲಿ ತೆರಿಗೆ ಹೆಚ್ಚಳ ಮಾಡುವ ಚಿಂತನೆಯಿಲ್ಲ. ಸೋರಿಕೆಯಾಗುತ್ತಿರುವ ತೆರಿಗೆ ಶುಲ್ಕ ಮತ್ತಿತರ ಬರಬೇಕಾದ ಆದಾಯದ ಮೂಲವನ್ನು ಸರಿಪಡಿಸಲು ಆದ್ಯತೆ ನೀಡಿದ್ದು, ಇದರಿಂದ ಹೆಚ್ಚಿನ ಆದಾಯ ಕ್ರೂಢೀಕರಣಕ್ಕೆ ಮುಂದಾಗಿದ್ದೇವೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.

ಅವರು ಸುರತ್ಕಲ್ ವಿಭಾಗೀಯ ಕಚೇರಿಯಲ್ಲಿ ಬಜೆಟ್ ಮಂಡನೆಯ ಪೂರ್ವಭಾವಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದರು. ಮಂಗಳೂರು ತಾಲೂಕು ನಾಗರಿಕ ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ, ಸುರತ್ಕಲ್ ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಕೆ ಇನ್ನೂ ಬಾಕಿಯಿದ್ದು, ಬಜೆಟ್‍ನಲ್ಲಿ ಆರ್ಥಿಕ ನೆರವು ನೀಡಬೇಕು. ಸುರತ್ಕಲ್ ಹೆದ್ದಾರಿಗೆ ಪರ್ಯಾಯವಾಗಿ ಉಡುಪಿ ಕಾನಾ ಬಾಳ, ಬಜಪೆ, ಪೊಳಲಿ ದ್ವಾರವಾಗಿ ಬೆಂಗಳೂರು ಹೆದ್ದಾರಿ ಸಂಪರ್ಕಕ್ಕೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಪಾಲಿಕೆ ಯೋಜನೆ ರೂಪಿಸಿ ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಇದರಿಂದ ನಗರದಲ್ಲಿ ಟ್ಯಾಂಕರ್ ಸಹಿತ ಘನ ವಾಹನಗಳ ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *

How Can We Help You?