ಧಕ್ಕೆಯಲ್ಲಿ ಮೀನುಗಾರಿಕಾ ದೋಣಿಯಲ್ಲಿಯೇ ತಲೆಕೆಳಗಾಗಿ ನೇತು ಹಾಕಿ ಕಾರ್ಮಿಕನ ಹಲ್ಲೆ

ನಗರದ ಧಕ್ಕೆಯಲ್ಲಿ ಮೀನುಗಾರಿಕಾ ಕಾರ್ಮಿಕನೋರ್ವನನ್ನು ದೋಣಿಯಲ್ಲಿಯೇ ತಲೆಕೆಳಗಾಗಿ ನೇತು ಹಾಕಿ ಹಲ್ಲೆ ನಡೆಸಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ಆಂಧ್ರ ಪ್ರದೇಶ ಮೂಲದ, ಮಂಗಳೂರಿನಲ್ಲಿ ಬೋಟ್ ನಲ್ಲಿ ಮೀನುಗಾರಿಕಾ ಕಾರ್ಮಿಕನಾಗಿರುವ ವೈಲ ಸೀನು ದೌರ್ಜನ್ಯಕ್ಕೊಳಗಾದ ಕಾರ್ಮಿಕ. ವೈಲ ಸೀನುವನ್ನು ಕಾಲು ಮೇಲೆ ತಲೆಕೆಳಗಾಗಿ ಮಾಡಿ ಹುಕ್ಸ್ ವೊಂದಕ್ಕೆ ಹಗ್ಗದಿಂದ ಕಟ್ಟಿ ನೇತು ಹಾಕಿ ದೌರ್ಜನ್ಯ ಎಸಗಲಾಗಿದೆ. 5-6 ಮಂದಿ ತೆಲುಗು ಭಾಷೆಯಲ್ಲಿ ಮಾತನಾಡುತ್ತ ವಿಚಾರಣೆ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಸ್ಥಳದಲ್ಲಿ ಮೊಬೈಲ್ ವೊಂದು ಕಳೆದು ಹೋಗಿದ್ದು, ಬಾಯಿ ಬಿಡಿಸುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಲಾಗಿದೆ ಎಂದು ಪೊಲೀಸರಿಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಕೃತ್ಯವನ್ನು ಅಲ್ಲಿದ್ದವರೇ ಯಾರೋ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಕೆಳ ದಿನಗಳ ಹಿಂದೆ ಕೃತ್ಯ ನಡೆದಿದ್ದು, ಇದೀಗ ವೀಡಿಯೋ ವೈರಲ್ ಆಗಿದೆ‌. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *

How Can We Help You?