ಸಂತ ಶ್ರೇಷ್ಠ ಕನಕದಾಸರ 534ನೇ ಜಯಂತ್ಯುತ್ಸವ ಅದ್ಧೂರಿ ಮೆರವಣಿಗೆ ಮತ್ತು ಉಪಾನ್ಯಾಸ ಕಾರ್ಯಕ್ರಮ

ಹಾಲುಮತ ತಾಲೂಕು ಸಮಿತಿ ಸುರತ್ಕಲ್ ತಡಂಬೈಲ್ ಸಂಘದ ವತಿಯಿಂದ ಸಂತ ಶ್ರೇಷ್ಠ ಕನಕದಾಸರ 534ನೇ ಜಯಂತ್ಯುತ್ಸವವನ್ನು ಅದ್ಧೂರಿ ಮೆರವಣಿಗೆ ಹಾಗೂ ಉಪಾನ್ಯಾಸ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು.

ತಡಂಬೈಲ್ ಶ್ರೀ ದುರ್ಗಾಂಬ ದೇವಸ್ಥಾನದಿಂದ ಆಯೋಜಿಸಲಾದ ಮೆರವಣಿಗೆಯನ್ನು ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಭಟ್ ಅವರು ಕನಕದಾಸರಿಗೆ ಆರತಿ ಬೆಳಗಿ, ಮಾಜಿ ಕಾರ್ಪೋರೇಟರ್ ರೇವತಿ ಪುತ್ರನ್ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಗುಡೂರ ಶ್ರೀ ಕಾಳದಾಸ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಪಿ. ವಾಯ್ ಅವರು ಕನಕದಾಸರ ಕುರಿತಾಗಿ ವಿಶೇಷ ಉಪಾನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕಾರ್ಪೋರೇಟರ್ ಶ್ವೇತಾ ಪೂಜಾರಿ, ಮಾಜಿ ಮನಪಾ ಸದಸ್ಯೆ ರೇವತಿ ಪುತ್ರನ್, ಸಮಿತಿಯ ಗೌರವಾಧ್ಯಕ್ಷ ಹನುಮಂತ ಹರ್ಲಾಪುರ, ಅಧ್ಯಕ್ಷ ಸಿದ್ದಲಿಂಗಪ್ಪ ಬಂಡಿ, ಹಾಲುಮತ ಮಹಾಸಭಾ ರಾಜ್ಯ ಸಂಘಟಕಾ ಕಾರ್ಯದರ್ಶಿ ಉಮೇಶ್ ಜಲನ್ನವರ್, ಸಮಿತಿ ಉಪಾಧ್ಯಕ್ಷರಾದ ಮಲ್ಲಪ್ಪ ನಾಗರಾಳ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *

How Can We Help You?