ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯ : ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ

ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯ ವತಿಯಿಂದ ಉತ್ತಮ ಸಂಶೋಧಕ, ಉತ್ತಮ ಸಂಶೋಧನಾ ಪತ್ರಿಕೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ದೇರಳಕಟ್ಟೆ ಕೆ.ಎಸ್ ಆಸ್ಪತ್ರೆಯ ಚಿಂತನಾ ಸಭಾಂಗಣದಲ್ಲಿ ನಡೆಯಿತು.

ತುಮಕೂರು ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ  ಪ್ರೊ.ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಉತ್ತಮ ಸಂಶೋಧಕ, ಉತ್ತಮ ಸಂಶೋಧನಾ ಪತ್ರಿಕೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಪ್ರೊ.ಬಾಲಕೃಷ್ಣ ಶೆಟ್ಟಿ ನಂತರ ಮಾತನಾಡಿ ವೈದ್ಯಕೀಯ ಕಾಲೇಜಿನಲ್ಲಿ ಯಾವ ವಿಭಾಗದಲ್ಲಿ ಕಲಿತರೂ ಅದರಲ್ಲೇನು ವಿಶೇಷತೆಯಿಲ್ಲ, ಆದರೆ ತಮ್ಮ ಕಲಿಕೆ ಹಾಗೂ ವೃತ್ತಿ ಜೀವನದಲ್ಲಿ ಮಾಡುವ ಕೆಲಸದಲ್ಲಿ ವಿಶೇಷತೆ ಇರುತ್ತದೆ ಎಂದು  ಅಭಿಪ್ರಾಯಪಟ್ಟರು.

ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಪ್ರೊ.ಎಂ.ಶಾಂತರಾಮ್ ಶೆಟ್ಟಿ ಮಾತನಾಡಿ, ಸಂಶೋಧನೆಗಳು ತಮ್ಮದೇ ಯೋಚನೆಯ ಆಧಾರದಲ್ಲಿ ಇರಬೇಕು. ಸಮಾಜ, ಸಮುದಾಯಕ್ಕೆ ಏನಾದರೂ ಕೊಡುಗೆ ನೀಡುವ ರೀತಿಯ ಯೋಚನೆಗಳಿಂದ ಕೂಡಿರಬೇಕು. ಸಮಾಜ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕ ವೃತ್ತಿ ಎನ್ನುವುದು ಅತ್ಯಂತ ಪವಿತ್ರವಾಗಿದೆ ಎಂದು ತಿಳಿಸಿದರು.

ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸತೀ ಶ್ ಕುಮಾರ್ ಭಂಡಾರಿ  ಕಾರ್ಯಕ್ರಮದ ಮಾಹಿತಿ ನೀಡಿದರು. ಉಪ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ, ಕುಲಸಚಿವೆ ಡಾ.ಆಲ್ಕಾ ಕುಲಕರ್ಣಿ, ಪ್ರೊ ಹರ್ಷ ಹಾಲಹಳ್ಳಿ , ಪ್ರೊ .ಜಯಪ್ರಕಾಶ್ ಹೆಗ್ಡೆ , ಸಂಶೋಧನಾ ನಿರ್ದೇಶಕ ಪ್ರೊ.ಪ್ರವೀಣ್ ಕುಮಾರ್ ಶೆಟ್ಟಿ . ಅಕ್ಷತಾ ,  ವಿನೂತಿನಿ ಉಪಸ್ಥಿತರಿದರು.

Related Posts

Leave a Reply

Your email address will not be published.

How Can We Help You?