ತಿಳಿದುಕೊಳ್ಳುವ ಮುಕ್ತ ಮನಸ್ಸಿನಿಂದ ಸಮಗ್ರಜ್ಞಾನಾರ್ಜನೆ : ಡಾ.ಸತೀಶ್ಚಂದ್ರಎಸ್

ಸದಾ ತಿಳಿದುಕೊಳ್ಳುವ ಮುಕ್ತ ಮನಸ್ಸಿನ ಹಂಬಲದಿಂದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಮಗ್ರತೆದಕ್ಕುತ್ತದೆಎಂದುಎಸ್.ಡಿ.ಎಂಕಾಲೇಜಿನ ಪ್ರಾಂಶುಪಾಲರಾದಡಾ. ಸತೀಶ್‌ಚಂದ್ರಎಸ್. ಅಭಿಪ್ರಾಯಪಟ್ಟರು

ಉಜಿರೆಯಎಸ್.ಡಿ.ಎಂ ಸ್ನಾತಕೋತ್ತರಕೇಂದ್ರದ ನೂತನ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ ಹೊಸದಾಗಿ ಪ್ರವೇಶಾತಿ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕಲಿಕೆ ಮತ್ತುಗ್ರಹಿಕೆಗಾಗಿತಮ್ಮ ಮನಸ್ಸನ್ನು ಸದಾ ತೆರೆದಿಟ್ಟುಕೊಳ್ಳಬೇಕು. ಹಾಗಿದ್ದಲ್ಲಿ ಮಾತ್ರ ಸಂಪೂರ್ಣ ಕಲಿಕೆ ಸಾಧ್ಯ. ಜ್ಞಾನವು ವಿವಿಧ ಮೂಲಗಳಿಂದ ಲಭ್ಯವಾಗುತ್ತಿರುತ್ತದೆ. ಹೀಗೆ ಲಭ್ಯವಾಗುವಜ್ಞಾನವನ್ನು ಸಮಗ್ರವಾಗಿ ವಿದ್ಯಾರ್ಥಿಗಳು ಹೇಗೆ ಗ್ರಹಿಸಿಕೊಳ್ಳುತ್ತಾರೆ ಎಂಬುದು ಮುಖ್ಯವಾಗುತ್ತದೆ.ಕೇಳುವ, ಅವಲೋಕಿಸುವ ಮತ್ತು ನಿರಂತರವಾಗಿಅಧ್ಯಯನ ನಡೆಸುವ ಮೂಲಕ ಎಷ್ಟು ಜ್ಞಾನವನ್ನು ಪಡೆಯುತ್ತಾರೆಎನ್ನುವುದರ ಮೇಲೆ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಮಹತ್ವದಕ್ಕುತ್ತದೆ.ಆ ಮೂಲಕ ಕಲಿಕೆ ಅರ್ಥಪೂರ್ಣವಾಗುತ್ತದೆಎಂದರು.

ಜ್ಞಾನವೆಂಬ ಕೊಳದಲ್ಲಿ ಎಷ್ಟು ನೀರಿದೆಎಂಬುದು ಮುಖ್ಯವಾಗುವುದಿಲ್ಲ. ತಿಳಿದುಕೊಳ್ಳುವ ಹಸಿವಿನೊಂದಿಗೆ ಈ ಕೊಳದಲ್ಲಿ ಜ್ಞಾನದ ಜಲವನ್ನು ತುಂಬಿಸಿಕೊಳ್ಳಲು ಬರುವವರು ಎಷ್ಟು ಪ್ರಮಾಣದಲ್ಲಿ ತಿಳುವಳಿಕೆಯನ್ನು ತುಂಬಿಸಿಕೊಳ್ಳುತ್ತಾರೆ ಎನ್ನುವುದು ಮಹತ್ವದ್ದೆನ್ನಿಸಿಕೊಳ್ಳುತ್ತದೆ. ನಿಮ್ಮಗ್ರಹಿಕೆಯಕೊಡಪಾನದಲ್ಲಿಎಷ್ಟು ನೀರನ್ನು ತುಂಬಿಸಿಕೊಳ್ಳುತ್ತೀರಿಎಂಬುದು ಮುಖ್ಯ.ವಿದ್ಯಾರ್ಥಿಗಳು ಎಷ್ಟು ಪ್ರಮಾಣದಲ್ಲಿ ತಿಳಿದುಕೊಳ್ಳುತ್ತಾರೆ ಮತ್ತು ಪ್ರಯೋಜನ ಪಡೆದುಕೊಳ್ಳುತ್ತಾರೆ ಎನ್ನುವುದರಆಧಾರದಲ್ಲಿಜ್ಞಾನ ದಾಟಿಕೊಳ್ಳುತ್ತದೆ ಎಂದರು.

ಶಿಕ್ಷಣ ರಂಗದ ಮೂಲಕ ಶೇ.24ರಷ್ಟು ವಿದ್ಯಾರ್ಥಿಗಳು ಪದವಿ ಪಡೆಯುತ್ತಾರೆ.ಇವರಲ್ಲಿ ಶೇ 8ರಷ್ಟು ಮಾತ್ರ ಸ್ನಾತಕೋತ್ತರ ಹಂತದ ಶಿಕ್ಷಣ ಪಡೆಯಲು ಮುಂದಾಗುತ್ತಾರೆ.ಉನ್ನತ ವ್ಯಾಸಂಗದ ಅವಕಾಶ ಸದುಪಯೋಗಿಸಿಕೊಳ್ಳುವ ಉದ್ದೇಶದಿಂದಎಸ್.ಡಿ.ಎಂ ಸ್ನಾತಕೋತ್ತರಕೇಂದ್ರದಲ್ಲಿ ಪ್ರವೇಶಾತಿ ಪಡೆದ ನೂತನ ವಿದ್ಯಾರ್ಥಿಗಳು ಯಶಸ್ಸಿನ ಕನಸನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರದ್ಧೆತೋರಬೇಕುಎಂದು ಸಲಹೆ ನೀಡಿದರು.

ಎಸ್.ಡಿ.ಎಂ ಸ್ನಾತಕೋತ್ತರಕೇಂದ್ರದಡೀನ್‌ಡಾ.ವಿಶ್ವನಾಥ್ ಪಿ ಅವರುಕಾಲೇಜಿನ ವಿವಿಧ ವಿಭಾಗಗಳ ಕಾರ್ಯವೈಖರಿ, ಕಲಿಕೆಯ ಹಂತಗಳು, ಈ ಹಿಂದಿನಿಂದ ನಡೆದುಕೊಂಡು ಬರುತ್ತಿರುವಮತ್ತು ನಂತರದ ದಿನಗಳಲ್ಲಿ ಆಯೋಜಿಸಲಾಗುವ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಕುರಿತು ಸಮಗ್ರ ಮಾಹಿತಿ ನೀಡಿದರು.

ಸಹಾಯಕ ಪ್ರಾಧ್ಯಾಪಕ ನವೀನ್‌ಕುಮಾರ್ ಸ್ವಾಗತಿಸಿದರು.ಸಹಾಯಕ ಪ್ರಾಧ್ಯಾಪಕಿಮಧುಶ್ರೀ ವಂದಿಸಿದರು.ಸಹಾಯಕ ಪ್ರಾಧ್ಯಾಪಕಿ ನಫೀಸತ್ ನಿರೂಪಿಸಿದರು.

Related Posts

Leave a Reply

Your email address will not be published. Required fields are marked *

How Can We Help You?