ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ  ಸ್ಪೆಕ್ಟ್ರಾ  ಅಸೋಸಿಯೇಷನ್ ಉದ್ಘಾಟನಾ ಸಮಾರಂಭ

“ಜಗತ್ತಿಗೆ ಶಕ್ತಿ ಏಕೆ ಅವಶ್ಯಕ, ಶಕ್ತಿ ಏಕೆ ಸರ್ವವ್ಯಾಪಿಯಾಗಿದೆ”, ಎಂದು ಎಸ್.ಡಿ. ಎಂ  ಸ್ನಾತಕೋತ್ತರ ಕೇಂದ್ರದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ|| ರಾಘವೇಂದ್ರ ಅಭಿಪ್ರಾಯಪಟ್ಟರು.

  ಉಜಿರೆಯ ಎಸ್.ಡಿ. ಎಂ  ಕಾಲೇಜಿನ ಭೌತಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಸ್ಪೆಕ್ಟ್ರಾ  ಅಸೋಸಿಯೇಷನ್ ಉದ್ಘಾಟನಾ ಸಮಾರಂಭದಲ್ಲಿ ವಿನೂತನ ವಿಜ್ಞಾನ ಮಾದರಿ  ಸೌರಮಂಡಲಯನ್ನು ಉದ್ಘಾಟಿಸಿ ಅವರು  ಮಾತನಾಡಿದರು.

‘ ನ್ಯಾಷನಲ್ ಎನರ್ಜಿ ಕನ್ಸರ್ವೇಶನ್ ದಿನ’ದ ಮಹತ್ವದ ಬಗೆಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸ್ಪೆಕ್ಟ್ರಾ  ಅಸೋಸಿಯೇಷನ್  ಉದ್ದೇಶಗಳೇನು ಮತ್ತು ಭೌತಶಾಸ್ತ್ರ ವಿಭಾಗದ ಚಟುವಟಿಕೆಗಳ ಬಗೆಗೆ  ವಿಭಾಗದ ಮುಖ್ಯಸ್ಥ ಪ್ರೊ.ಎಸ್. ಎನ್  ಕಾಕತ್ಕರ್ ತಿಳಿಸಿಕೊಟ್ಟರು.

 ಈ ವೇಳೆ ವಿದ್ಯಾರ್ಥಿಗಳು ತಯಾರಿಸಿದ  ಇ -ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ನಿರಂಜನ್ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

 ಈ ಕಾರ್ಯಕ್ರಮವನ್ನು ಅಸೋಸಿಯೇಷನ್ ಅಧ್ಯಕ್ಷ ವೈಷ್ಣವಿ ಸ್ವಾಗತಿಸಿ, ಅಸೋಸಿಯೇಶನ್ ಕಾರ್ಯದರ್ಶಿ ಕು. ಸ್ನೇಹ ವಂದಿಸಿ, ಭಾರತ್  ಕುಮಾರ್ ನಿರೂಪಿಸಿದರು.

Related Posts

Leave a Reply

Your email address will not be published. Required fields are marked *

How Can We Help You?