ಚಿಲಿಂಬಿ; ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್ 43ನೇ ವಾರ್ಷಿಕ ಸಾಧನಾ ಸಂಭ್ರಮ

  ಮಂಗಳೂರು ಚಿಲಿಂಬಿ ಆದರ್ಶನಗರದ ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್(ರಿ) ಇದರ 43ನೇ ವಾರ್ಷಿಕ ಸಾಧನಾ ಸಂಭ್ರಮ ದ ಪ್ರಯುಕ್ತ  ಅಸೋಸಿಯೇಶನ್ ವಠಾರ ದಲ್ಲಿ ಡಿಸೆಂಬರ್ 26 ರ ಆದಿತ್ಯವಾರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ  ಮಧ್ಯಾಹ್ನ 12:00ಕ್ಕೆ ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ.

       ಸಂಜೆ 7.00ಕ್ಕೆ ಚಿಲಿಂಬಿ ಹಿಲ್ಸ್ ಮೈದಾನದಲ್ಲಿ ಶಿಕ್ಷಣ ಮತ್ತು ಆರೋಗ್ಯ ನಿಧಿಯ ಸಮರ್ಪಣೆ ಹಾಗೂ  43ನೇ ವಾರ್ಷಿಕ ಸಾಧನಾ ಸಂಭ್ರಮ, ಅಸೋಸಿಯೇಷನ್ ಸದಸ್ಯರಿಂದ  ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿಶೇಷ ಆಕರ್ಷಣೆಯಾಗಿ ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಅಭಿನಯಿಸುವ  ಗಡಿನಾಡ ಕಲಾನಿಧಿ ಕೃಷ್ಣ ಜಿ ಮಂಜೇಶ್ವರ ನಿರ್ದೇಶಿಸಿ ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ ಅಭಿನಯದ ನಿತ್ಯೆ ಬನ್ನಗ  ಎಂಬ ಜನಪ್ರಿಯ ತುಳು ಹಾಸ್ಯಮಯ   ನಾಟಕ ಪ್ರದರ್ಶನ ಗೊಳ್ಳಲಿದೆ.

Related Posts

Leave a Reply

Your email address will not be published.

How Can We Help You?