ಸರ್ವಧರ್ಮ ಕ್ರಿಸ್ ಮಸ್ ಸೌಹಾರ್ದ ಕೂಟ : ಮಾಜಿ ಎಮ್ಎಲ್ ಸಿ ಐವನ್ ಡಿಸೋಜಾ ನೇತೃತ್ವದಲ್ಲಿ ಆಯೋಜನೆ

ಮಾಜಿ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾರವರ ನೇತೃತ್ವದಲ್ಲಿ ಸರ್ವಧರ್ಮ ಕ್ರಿಸ್‍ಮಸ್ ಸೌಹಾರ್ದ ಕೂಟ ಬಲ್ಮಠದ ಬಿಷಪ್ ಜತ್ತನ್ನ ಮೊಮೋರಿಯಲ್ ಸಭಾಂಗಣದಲ್ಲಿ ಜರುಗಿತು.ಕಾರ್ಯಕ್ರಮವನ್ನು ಮಂಗಳೂರು ಧರ್ಮಪ್ರಾಂತ್ಯದ ರೆವರೆಂಡ್ ಫಾದರ್ ಎಲೋಶಿಯಸ್ ಪೌಲ್ ಡಿಸೋಜಾ ಅವರು ಕೇಕ್ ಕತ್ತರಿಸಿ ಕ್ರಿಸ್‍ಮಸ್ ಹಬ್ಬದ ಶುಭಾಶಯ ಕೋರಿದರು.

ಆಕಾಶವಾಣಿಯ ನಿವೃತ್ತ ಅಧಿಕಾರಿ ಡಾ. ಮುದ್ದು ಮೂಡುಬೆಳ್ಳೆ ಅವರು ಕ್ರಿಸ್‍ಮಸ್ ಸಂದೇಶ ಸಾರಿದರು.ಖ್ಯಾತ ಚಲನಚಿತ್ರ ನಟ, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅವರು ಮಾತನಾಡಿ,ಮಾಜಿ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು.ಈ ವೇಳೆ ಬಲ್ಮಠದ ಕೆಟಿಸಿ ಪ್ರಾಂಶುಪಾಲರಾದ ಹೆಚ್.ಎಮ್ ವಾಟ್ಸನ್, ಮೂಡಾದ ಮಾಜಿ ಅಧ್ಯಕ್ಷರಾದ ಕೋಡಿಜಾಲ್ ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *

How Can We Help You?