ಮತಾಂತರ ನಿಷೇಧ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ಸವಣೂರಿನಲ್ಲಿ ಎಸ್ ಡಿಪಿಐ ಪ್ರತಿಭಟನೆ

ಸುಳ್ಯ: ಮತಾಂಧ ಸರ್ವಾಧಿಕಾರಿ ಧೋರಣೆಯ ಮತಾಂತರ ನಿಷೇಧ ಮಸೂದೆ ಹಿಂಪಡೆಯುವಂತೆ ಒತ್ತಾಯಿಸಿ ಎಸ್ ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಸವಣೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ರಾಜ್ಯ ಬಿಜೆಪಿ ಸರಕಾರ  ವಿಧಾನ ಸಭಾ ಅಧಿವೇಶನದಲ್ಲಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸದೆ ಧರ್ಮಗಳ ಬಗ್ಗೆ ಒಡಕನ್ನು ಉಂಟುಮಾಡುವ ಸಂವಿಧಾನ ವಿರೋಧಿಯಾದ ಕಾನೂನುಗಳನ್ನು ಜಾರಿ ಮಾಡುತ್ತಿದೆ ಎಂದು ಟೀಕಿಸಿದರು. ಬಲವಂತದ ಮತಾಂತರದ ಪ್ರಕರಣಗಳು ಬೆಳಕಿಗೆ ಬರದಿದ್ದರೂ ಕೂಡ ಏಕಾಏಕಿ ನಿರ್ದಿಷ್ಟ ಸಮುದಾಯವನ್ನು ಗುರಿಪಡಿಸಲು ಮತಾಂತರ ನಿಷೇಧ ಮಸೂದೆಯನ್ನು ತರಲಾಗಿದೆ ಎಂದರು.

ಪ್ರತಿಭಟನಾ ಸಭೆಯಲ್ಲಿ ಎಸ್ ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಬಾಬು ಸವಣೂರು, ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ, ಎಸ್ ಡಿಪಿಐ ಬೆಳ್ಳಾರೆ ಬ್ಲಾಕ್ ಅಧ್ಯಕ್ಷ ಹಮೀದ್ ಮರಕ್ಕಡ, ಸವಣೂರು ಗ್ರಾಮ ಸಮಿತಿ ಅಧ್ಯಕ್ಷ ರಝಾಕ್ ಕೆನರಾ, ಸವಣೂರು ಮುಸ್ಲಿಂ ಒಕ್ಕೂಟ ಸಂಚಾಲಕ ಬಿ.ಎಂ.ಮಹಮೂದ್, ಬದ್ರಿಯಾ ಜುಮಾ ಮಸ್ಜಿದ್ ಚಾಪಲ್ಲ ಜೊತೆ ಕಾರ್ಯದರ್ಶಿ ಎಸ್ ಇ.ಅಬ್ದುಲ್ಲಾ,ಇರ್ಷಾದ್ ಸರ್ವೆ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಎಸ್ ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾರ್ಯದರ್ಶಿ ನಝೀರ್ ಸಿಎ ಸ್ವಾಗತಿಸಿ, ಸವಣೂರು ಬ್ಲಾಕ್ ಅಧ್ಯಕ್ಷ ರಫೀಕ್ ಎಂ.ಎ ನಿರೂಪಿಸಿದರು.

Related Posts

Leave a Reply

Your email address will not be published.

How Can We Help You?