ಮನೆ ಮನೆಗೆ ಇಂಧನ ಯೋಜನೆ : ಮೇಯರ್ ನೇತೃತ್ವದಲ್ಲಿ ನಡೆದ ಸಭೆ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ ಗೈಲ್ ಸಂಸ್ಥೆಯವರು ಮನೆ ಮನೆಗೆ ಇಂಧನ ಎನ್ನುವ ಮಹತ್ತರ ಯೋಜನೆಯನ್ನು ಹಮ್ಮಿಕೊಂಡಿದ್ದು ನಗರದಲ್ಲಿ ಹಲವೆಡೆ ಕಾಮಗಾರಿಗಳು ನಡೆಯುವಾಗ ಕೆಲವು ನಳ್ಳಿ ನೀರಿನ ಕೊಳವೆಗಳಿಗೆ ಹಾನಿ ಮಾಡುತ್ತಿದ್ದು ಮತ್ತು ಕೆಲವು ಪ್ರದೇಶಗಳಲ್ಲಿ ಅಗೆದು ಹಾಕಿದ್ದು ಈ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸದ್ರಿ ಸಂಸ್ಥೆಯ ಮುಖ್ಯಸ್ಥರು ಹಾಗೂ ಗುತ್ತಿಗೆದಾರರನ್ನು ಒಳಗೊಂಡ ಸಭೆಯನ್ನು ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ನಡೆಯಿತು

ಸಭೆಯಲ್ಲಿ ಗೈಲ್ ಸಂಸ್ಥೆಯವರು ಯೋಜಿಸಿದ ಕಾಮಗಾರಿಗಳ ವಿವರಗಳನ್ನು ಪಾಲಿಕೆಗೆ ನೀಡುವಂತೆ ಮತ್ತು ಯಾವ ಪ್ರದೇಶದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದೆಂದು ಪೂರ್ವದಲ್ಲಿ ಪಾಲಿಕೆಯ ಸಂಬಂಧಿತ ವಿಭಾಗಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಯಿತು. ಅಲ್ಲದೆ ಸದ್ರಿ ಸಂಸ್ಥೆಯ ಆಯಾಯ ಕಾಮಗಾರಿಗೆ ಸಂಬಂಧಪಟ್ಟಂತೆ ಅಭಿಯಂತರರುಗಳು ಮಾಹಿತಿಯನ್ನು ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಮೇಯರ್ ರವರು ಸೂಚಿಸಿದರು. ಹಾಗೂ ಕಾಮಗಾರಿ ಮಾಡಿದ್ದಲ್ಲಿ ರಸ್ತೆ ಅಗೆತ ನಡೆದರೆ ಅದನ್ನು ಸರಿಪಡಿಸಿ ಮೊದಲಂತೆ ಇರುವಂತೆ ಕ್ರಮಕೈಗೊಳ್ಳಲು ಆದೇಶಿಸಿದರು. ನಗರದಲ್ಲಿ ಕಾಮಗಾರಿಯನ್ನು ನಡೆಸುವಾಗ ಸಾರ್ವಜನಿಕರಿಗೆ ಯಾವುದೇ ತರಹದ ತೊಂದರೆಯನ್ನುಂಟು ಮಾಡದೆ ಕಾಮಗಾರಿಯನ್ನು ನಿರ್ವಹಿಸಲು ನೆರೆದಿರುವ ಎಲ್ಲಾ ಸಂಸ್ಥೆಗಳಿಗೆ ಸೂಚಿಸಿದರು.ಸಭೆಯಲ್ಲಿ ಉಪಮೇಯರ್ ಸುಮಂಗಳಾ ರಾವ್, ಪಾಲಿಕೆಯ ಆಯುಕ್ತರಾದ ಅಕ್ಷಯ್ ಶ್ರೀಧರ್, ಮುಖ್ಯ ಸಚೇತಕರಾದ ಸುಧೀರ್ ಶೆಟ್ಟಿ, ಮಾಜಿ ಮೇಯರ್ ಗಳಾದ ಭಾಸ್ಕರ್ , ಶಶಿಧರ್ ಹೆಗ್ಡೆ, ದಿವಾಕರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಲೋಕೇಶ್ ಬೊಳ್ಳಾಜೆ, ಲೀಲಾವತಿ ಪ್ರಕಾಶ್ ಮತ್ತು ಶೋಭ ರಾಜೇಶ್ ಮತ್ತು ಸದಸ್ಯರಾದ ನವೀನ್ ಆರ್ ಡಿ ಸೋಜ ಮತ್ತು ಜಯನಂದನ್ ಅಂಚನ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *

How Can We Help You?