ಕುಂಭಾಶಿಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮ

ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಕುಂಭಾಸಿಯಲ್ಲಿ ಡಿಸೆಂಬರ್ 24ರಿಂದ ಡಿ. 29ರ ವರೆಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಡಿಸೆಂಬರ್ 24ರಂದು ಶ್ರೀ ದೇವಿಯ ಸನ್ನಿಧಿಯಲ್ಲಿ ಫಲ ಸಮರ್ಪಣೆ, ಪ್ರಾರ್ಥನೆ, ಯಾಗಶಾಲಾ ಪ್ರವೇಶ, ಗುರುಪ್ರಾಥನೆ, ಗಣಪತಿ ಪೂಜೆ, ಪುಣ್ಯಾಹ, ನಾಂದಿ, ಗಣಪತಿ ಹೋಮ, ಮಹಾಸಂಕಲ್ಪ. ಋತ್ವಿಗ್ವರಣೆ, ನವಾವರಣ ಪೂಜೆ, ಶ್ರೀ ಚಂಡೀಪುರಶ್ಚರಣ ಆರಂಭ, ಕುಮಾರಿ ಪೂಜೆ, ಸುವಾಸಿನೀ ಪೂಜೆ

ಮಧ್ಯಾಹ್ನ ಅನ್ನಸಂರ್ತಣೆ ಸಾಯಂಕಾಲ : 5 ಗಂಟೆಗೆ ನವಾಕ್ಷರೀ ಜಪ ಸಪ್ತಶತೀ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, 7 ಗಂಟೆಗೆ ಮಂಗಳಾರತಿ, ಅಷ್ಟಾವಧಾನ ನಡೆಯಲಿರುವುದು.ಡಿಸೆಂಬರ್ 25ರಂದು ಬೆಳಿಗ್ಗೆ : 7-30ಕ್ಕೆ ಗುರುಪ್ರಾರ್ಥನೆ, ನವಾವರಣ ಪೂಜೆ, ಶ್ರೀ ಚಂಡೀಪುರಶ್ಚರಣ, ಕುಮಾರಿ ಪೂಜೆ, ಸುವಾಸಿನೀ ಪೂಜೆ ಮಧ್ಯಾಹ್ನ ಅನ್ನಸಂರ್ತಣೆ, ಸಂಜೆ   5 ಗಂಟೆಗೆ ನವಾಕ್ಷರೀ ಜಪ, ಸಪ್ತಶತೀ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, 7ಗಂಟೆಗೆ ಮಂಗಳಾರತಿ, ಅಷ್ಟಾವಧಾನ ಡಿ. 26ರ ಆದಿತ್ಯವಾರ ಬೆಳಿಗ್ಗೆ 7.30ಕ್ಕೆ ಗುರುಪ್ರಾರ್ಥನೆ, ನವಾವರಣ ಪೂಜೆ, ಶ್ರೀ ಚಂಡೀಪುರಶ್ಚರಣ, ಕುಮಾರಿ ಪೂಜೆ ಜರುಗಲಿದೆ.ಡಿಸೆಂಬರ್ 27ರಂದು ಬೆಳಿಗ್ಗೆ : 7-30ಕ್ಕೆ ಗುರುಪ್ರಾರ್ಥನೆ, ನವಾವರಣ ಪೂಜೆ, ಶ್ರೀ ಚಂಡೀಪುರಶ್ಚರಣ, ಕುಮಾರಿ ಪೂಜೆ, ಸುವಾಸಿನೀ ಪೂಜೆ, ಮಧ್ಯಾಹ್ನ ಅನ್ನಸಂರ್ತಣೆಸಾಯಂಕಾಲ : 5 ಗಂಟೆಗೆ ನವಾಕ್ಷರೀ ಜಪ, ಸಪ್ತಶತೀ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, 7 ಗಂಟೆಗೆ ಮಂಗಳಾರತಿ,ಅಷ್ಟಾವಧಾನಡಿಸೆಂಬರ್ 28 ಬೆಳಿಗ್ಗೆ : 7-00 ಗಂಟೆಗೆ ಶತಚಂಡಿಕಾಯಾಗ ಆರಂಭ ಮಧ್ಯಾಹ್ನ ಗಂಟೆ 12-00ಕ್ಕೆ ಪೂರ್ಣಾಹುತಿ, ಕುಮಾರಿ ಪೂಜೆ, ಸುವಾಸಿನೀ ಪೂಜೆ, ಮಹಾಮಂಗಳಾರತಿಯ ನಂತರ ಮಹಾಅನ್ನಸಂರ್ತಣೆ, ಸಂಜೆ ಗಂಟೆ 5-00ಕ್ಕೆ ಸರಿಯಾಗಿ ದೇವಳದಲ್ಲಿ ರಂಗಪೂಜೆ, ಅಮ್ಮನವರ ಸ್ವರ್ಣಪಲ್ಲಕ್ಕಿ ಉತ್ಸವ,ಶ್ರೀ ದೇವರ ಉತ್ಸವ ಅಷ್ಟಾವಧಾನ ಸೇವೆ, ತೀರ್ಥ ಗಂಧ-ಪ್ರಸಾದ.ದಿನಾಂಕ : 29-12-2021ನೇ ಬುಧವಾರ ಸಂಜೆ ಗಂಟೆ 5-00ಕ್ಕೆ ಭೂವೈಕುಂಠ ಕ್ಷೇತ್ರ ತಿರುಮಲದಲ್ಲಿ ಪ್ರತಿನಿತ್ಯ ನಡೆಯುವ ಅಗಮ ಪದ್ಧತಿಯಂತೆಶ್ರೀನಿವಾಸ ಕಲ್ಯಾಣೋತ್ಸವ ಶ್ರೀ ಎಸ್. ವೆಂಕಟೇಶ ಮೂರ್ತಿ ಸಂಸ್ಥಾಪಕರು ಶ್ರೀವಾರಿ ಫೌಂಡೇಶನ್ ಬೆಂಗಳೂರು ಇವರ ನೇತೃತ್ವದಲ್ಲಿ ನಡೆಯಲಿರುವುದು.

ಶ್ರೀ ಶ್ರೀನಿವಾಸ ದೇವರ ಹಾಗೂ ಪದ್ಮಾವತಿ ದೇವಿಯ ಕಲ್ಯಾಣೋತ್ಸವದ ಕಾರ್ಯಕ್ರಮ, ಮಂಗಳಾರತಿ, ಪ್ರಸಾದ ವಿತರಣೆ. ಅದೇ ದಿನ ಮೈಸೂರಿನ ಖ್ಯಾತ ಕಲಾವಿದರಾದ ವಿದುಷಿ ಡಾ. ದೀಪಿಕಾ ಪಾಂಡುರಂಗಿ ಮತ್ತು ತಂಡದವರಿಂದ ದಾಸವಾಣಿ ಕಾರ್ಯಕ್ರಮ.ಈ ಎಲ್ಲಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಗೆ ಆಗಮಿಸಿ ಶ್ರೀ ದೇವರ ಗಂಧ ಮುಡಿ ಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗ ಬೇಕೆಂದು  ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀಮತಿ ಅನಿತಾ ಹಾಗೂ ಶ್ರೀ ದೇವರಾಯ ಮಂಜುನಾಥ ಶೇರಿಗಾರ, ಶ್ರೀಯುತ ಪುರುಷೋತ್ತಮ ಭಟ್ಟರು.( ಕಾರ್ ದಾಂಡ ಮುಂಬೈ) ಹಾಗೂ ಭಕ್ತ ವೃಂದದವರು. ಅರ್ಚಕರು, ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಊರ ಹತ್ತು ಸಮಸ್ತರು ಮತ್ತು ಭಗವದ್ಭಕ್ತರು ಅಪೇಕ್ಷಿಸಿರುತ್ತಾರೆ.

Related Posts

Leave a Reply

Your email address will not be published.

How Can We Help You?