ಪಡುಬಿದ್ರಿ : ಸ್ಕೂಟರ್ ನ ನ ಹಿಂಬದಿಗೆ ಢಿಕ್ಕಿಯಾದ ಕಾರು: ಸವಾರನಿಗೆ ಗಂಭೀರ ಗಾಯ

ಸ್ಕೂಟರ್ ನ ಹಿಂಬದಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಂಭೀರ ಸ್ಥಿತಿಯಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ.

ಗಾಯಗೊಂಡವರು ಮೂಲತಃ ಪಡುಬಿದ್ರಿ ಪಾದೆಬೆಟ್ಟು ನಿವಾಸಿ ಸುನೀಲ್ ಶೆಟ್ಟಿ(45), ತನ್ನ ಸಂಸಾರದೊಂದಿಗೆ ಮುಂಬೈನಲ್ಲಿ ನೆಲಸಿರುವ ಇವರು ಇತ್ತೀಚೆಗೆ ಯಾವುದೋ ಕಾರ್ಯ ನಿಮಿತ್ತ ಊರಿಗೆ ಬಂದಿದ್ದ ಇವರು ಪಾದೆಬೆಟ್ಟು ಮನೆಯಿಂದ ಪಡುಬಿದ್ರಿ ಪೇಟೆಗೆ ಸ್ಕೂಟರ್ ಏರಿ ಬರುತ್ತಿದ್ದು, ಪೇಟೆ ಸಮೀಪದ ಅಂಚೆ ಕಛೇರಿಯ ಮುಂಭಾಗ ವೇಗವಾಗಿ ಮುನ್ನುಗ್ಗಿ ಬಂದ ಆಲ್ಟೋ ಕಾರು ಚಾಲಕನ ಅಜಾಗರುಗತೆಯ ಚಾಲನೆಯಿಂದ ಸ್ಕೂಟರ್ ನ ಹಿಂಭಾಗಕ್ಕೆ ಡಿಕ್ಕಿಯಾದ ರಭಸಕ್ಕೆ ಕಾರಿನ ಗಾಜಿಗೆ ಬಿದ್ದು ರಸ್ತೆಗೆ ಬಿದ್ದ ಇವರನ್ನು ಬಹಳಷ್ಟು ದೂರ  ರಸ್ತೆಯಲ್ಲೇ ಎಳೆದುಕೊಂಡು ಬಂದಿದೆ.

ಮುಖ ತಲೆ ಸಹಿತ ದೇಹದ ಬಹುತೇಕ ಭಾಗಗಳಿಗೆ ಗಂಭೀರ ಗಾಯಗಳಾದ ಅವರನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನಡೆಸಿದರೂ ಒದ್ದಾಟ ನಡೆಸುತ್ತಿದ್ದ ಗಾಯಾಳುವಿನ ಗುರುತು ಪತ್ತೆಯಾಗದ ಪರಿಣಾಮ ವೈಧ್ಯರು ಸಹಿತ ಪೆÇಲೀಸರು ಗುರುತು ಪತ್ತೆಗಾಗಿ ಸುಮಾರು ಅರ್ಧ ಗಂಟೆಗೂ ಅಧಿಕ ಹೊತ್ತು ಶ್ರಮಿಸಿ ಆ ಬಳಿಕ ಆಂಬುಲೆನ್ಸ್ ಮೂಲಕ ಮಣಿಪಾಲ್ ಆಸ್ಪತ್ರೆಗೆ ಸಾಗಿಸಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೊಳ ಪಡಿಸಲಾಗಿದ್ದು, ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *

How Can We Help You?