ಮಂಗಳೂರಿನಲ್ಲಿ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್

ಸ್ಯಾಂಡಲ್ ವುಡ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮಂಗಳೂರಿನ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದರು.ದೇವರ ದರ್ಶನ ಪಡೆದ ರಚಿತ ರಾಮ್ ವಿಶೇಷ ಪೂಜೆ ಸಲ್ಲಿಸಿದ್ರು.

ಅರ್ಚಕರು ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿ ದೇವಳದ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು.ದೇವಸ್ಥಾನದಲ್ಲಿ ರಚಿತಾ ರಾಮ್ ಕಂಡು ಅಭಿಮಾನಿಗಳು ಸೆಲ್ಫಿ ತೆಗೆಸಿಕೊಂಡರು.ಇದೇ ಸಂದರ್ಭ ಮಾತನಾಡಿದ ರಚಿತಾ ರಾಮ್ ಕರಾವಳಿಯ ದೇವಸ್ಥಾನಗಳು ಭಕ್ತಿಯ ತಾಣಗಳಾಗಿದ್ದು ಎಲ್ಲರಿಗೂ ಹೊಸವರ್ಷದ ಶುಭಾಶಯಗಳೊಂದಿಗೆ ದೇವರು ಆಯುರಾರೋಗ್ಯ ಐಶ್ವರ್ಯ ನೀಡಲಿ ಎಂದರು.ಕರಾವಳಿ ಶೈಲಿಯ ವಿಶೇಷ ಖಾದ್ಯಗಳು ಹಾಗೂ ಊಟ ಬಲು ಇಷ್ಟ ಎಂದರು.

Related Posts

Leave a Reply

Your email address will not be published.

How Can We Help You?