ಶ್ರೀ ವಿಶ್ವೇಶತೀರ್ಥ ಧ್ಯಾನಮಂದಿರ ಲೋಕಾರ್ಪಣೆ

ಕಡಬ: ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ಕೊಡುವ ಸಂಪ್ರದಾಯ ಬೆಳೆಸಿಕೊಳ್ಳಬೇಕು. ಓದಿನ ಜೊತೆಗೆ ದೊಡ್ಡವರ ಮನಸ್ಸಿಗೆ ನೋವಾಗದಂತೆ ವರ್ತನೆ ಮಾಡಬೇಕು. ಶಿಕ್ಷಣದೊಂದಿಗೆ ವಿನಯ ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮ ನಾಗರಿಕನಾಗಲು ಸಾಧ್ಯ ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.ಅವರು ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ

ಆಂಗ್ಲಮಾಧ್ಯಮ ಶಾಲಾ ಆವರಣದಲ್ಲಿ ನಿರ್ಮಾಣಗೊಂಡಿರುವ ಉಡುಪಿ ಪೇಜಾವರ ಮಠಾಧೀಶರಾಗಿದ್ದ ವೃಂದಾವನಸ್ಥ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಧ್ಯಾನಮಂದಿರ ಲೋಕಾರ್ಪಣೆಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು. ಉದ್ಯೋಗಕ್ಕಾಗಿ ಆಂಗ್ಲಭಾಷೆ ಕಲಿಯೋಣ, ಆದರೆ ನಮ್ಮ ಸಂಸ್ಕøತಿ ಬಿಡುವುದು ಬೇಡ ಎಂದು ಹೇಳಿದರು.

ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಒಳ್ಳೆಯ ನಡವಳಿಕೆ ಮೈಗೂಡಿಸಿಕೊಳ್ಳಬೇಕು. ರಾಮಕುಂಜದಂತಹ ಹಳ್ಳಿಯಲ್ಲಿ ಹುಟ್ಟಿದ ಗುರುಗಳಾಗಿರುವ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮವಿಭೂಷಣ ಪ್ರಶಸ್ತಿ ಬಂದಿದೆ. ಅವರ ನೆನಪು ಅವರ ಹುಟ್ಟೂರಿನಲ್ಲಿ ಸದಾ ಸ್ಮರಣೀಯವಾಗಿರಬೇಕೆಂದು ಧ್ಯಾನಮಂದಿರ ನಿರ್ಮಾಣವಾಗಿದೆ. ಅವರ ಆದರ್ಶಗಳನ್ನು ಅನುಸರಿಸಿ ನಾವೂ ಎತ್ತರಕ್ಕೆ ಏರೋಣ. ಗುರುಗಳ ಅನುಗ್ರಹದಿಂದ ಬದುಕಿನಲ್ಲಿ ಸಿದ್ಧಿಯಾಗಲಿ ಎಂದರು.ಮುಂಬೈಯ ಸೀತಾರಾಮ ಶೆಟ್ಟಿಯವರು ಸಂದರ್ಭೋಚಿತವಾಗಿ ಮಾತನಾಡಿದರು. ಹಿರಿಯ ಸಾಧಕವಿದ್ಯಾರ್ಥಿ ಭರತ್, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್., ರಘುರಾಮ ಆಚಾರ್, ಪ್ರಕಾಶ್ ಆಚಾರ್ರವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?