ಏರೆಗಾವುಯೆ ಕಿರಿಕಿರಿ ತುಳು ಸಿನಿಮಾ : ಕರಾವಳಿ ಜಿಲ್ಲೆಯಾದ್ಯಂತ ಇಂದು ಬಿಡುಗಡೆ

ವೇಗಸ್ ಫಿಲಮ್ಸ್ ಲಾಂಛನದಲ್ಲಿ ತಯಾರಾದ ಹೆಸರಾಂತ ಹಿರಿಯ ಸಾಹಸ ನಿರ್ದೇಶಕ ರಾಮ್ ಶೆಟ್ಟಿಯು ನಿರ್ದೇಶನದ, ರೋಶನ್ ವೇಗಸ್ ನಿರ್ಮಾಣದ ಏರಗಾವುಯೆ ಕಿರಿಕಿರಿ ತುಳು ಸಿನಿಮಾ ಇಂದು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಗೊಂಡಿತು.ಹಾಸ್ಯಮಯ ಮತ್ತು ಉತ್ತಮ ಸಂದೇಶವನ್ನು ಸಾರಿದ ಸಿನಿಮಾ ಏರೆಗಾವುಯೆ ಕಿರಿಕಿರಿ ಇಂದು ಕರಾವಳಿಯಾದ್ಯಂತ ಬಿಡುಗಡೆಗೊಂಡಿತು. ಮಂಗಳೂರಿನ ಬಿಗ್ ಸಿನಿಮಾಸ್, ಪಿ.ವಿ.ಆರ್, ಸಿನಿ ಪೊಲೀಸ್, ಉಡುಪಿಯಲ್ಲಿ ಕಲ್ಪನಾ, ಕಾರ್ಕಳದಲ್ಲಿ ರಾಧಿಕಾ, ಮಣಿಪಾಲದಲ್ಲಿ ಭಾರತ್ ಮಾಲ್, ಬೆಳ್ತಂಗಡಿಯಲ್ಲಿ ಭಾರತ್ ಸಿನಿಮಾ ಮಂದಿರದಲ್ಲಿ ಸಿನಿಮಾ ಬಿಡುಗಡೆಗೊಂಡಿತು.

ಮಂಗಳೂರಿನ ಬಿಗ್ ಸಿನಿಮಾಸ್‍ನಲ್ಲಿ ಹಿರಿಯ ಸಾಹಸ ನಿರ್ದೇಶಕ ರಾಮ್ ಶೆಟ್ಟಿ ಅವರು ದೀಪಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಏರೆಗಾವುಯೇ ಕಿರಿಕಿರಿ ಸಿನಿಮಾ ತೆರೆಗೆ ಬರಲು ಮುಹೂರ್ತ ಇಂದು ಫಿಕ್ಸ್ ಆಗಿದ್ದು, ಕರಾವಳಿಯಾದ್ಯಂತ ಸಿನಿಮಾ ಇಂದು ಬಿಡುಗಡೆಗೊಂಡಿತು. ಪ್ರೇಕ್ಷಕರಗೂ ಕೂಡ ಸಿನಿಮಾ ಮೆಚ್ಚಬಹುದು ಎಂದು ಹೇಳಿದರು.ಆನಂತರ ಪತ್ರಕರ್ತ ಮತ್ತು ಸಿನಿಮಾ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಅವರು ಮಾತನಾಡಿ, ರೋಶನ್ ವೇಗಸ್ ಅವರು ತುಳು ಚಿತ್ರರಂಗದ ಅಭಿಮಾನದಿಂದ ತುಳು ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಎಲ್ಲರೂ ಈ ಸಿನಿಮಾಕ್ಕೆ ಪ್ರೋತ್ಸಾಹವನ್ನು ನೀಡಿ ಎಂದು ಹೇಳಿದರು.ಏರೆಗಾವುಯೇ ಕಿರಿಕಿರಿ ಚಿತ್ರದ ಚಿತ್ರದ ನಿರ್ಮಾಪಕ ರೋಶನ್ ವೇಗಸ್ ಮಾತನಾಡಿ, ಏರೆಗಾವುಯೇ ಕಿರಿಕಿರಿ ತುಳು ಇಂದು ರಿಲೀಸ್ ಆಗಿದೆ. ಸಿನಿಮಾ ಉತ್ತಮವಾಗಿ ಮೂಡಿಬಂದಿದೆ. ಎಲ್ಲರೂ ಸಿನಿಮಾವನ್ನು ಪ್ರೋತ್ಸಾಹಿಸಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿನಿಮಾದ ನಾಯಕ ನಟ ಮೊಹಮ್ಮದ್ ನಯೀಮ್ ಮತ್ತು ನಾಯಕಿ ಐಶ್ವರ್ಯ ಹೆಗ್ಡೆ ಚಿತ್ರಕಲಾ ನಿರ್ದೇಶಕ, ತಮ್ಮ ಲಕ್ಷ್ಮಣ, ನಿರ್ಮಾಪಕ ರೋಶನ್ ವೇಗಸ್, ಶ್ರದ್ಧಾಸಾಲಿಯಾನ್, ಪ್ರದೀಪ್ ಚಂದ್ರ ಕುಪ್ಪಾಡಿ, ಹರೀಶ್ ವಾಸು ಶೆಟ್ಟಿ, ಸಾಯಿ ಕೃಷ್ಣ ಕುಡ್ಲ, ಉಮೇಶ್ ಮಿಜಾರ್, ಸುನಿಲ್ ನೆಲ್ಲಿಗುಡ್ಡೆ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.ಈ ಸಿನಿಮಾದಲ್ಲಿ ಬಹುತೇಕ ಪ್ರಖ್ಯಾತ ಕಲಾವಿದರು ಬಣ್ಣ ಹಚ್ಚಿದ್ದು ವಿಶೇಷವಾಗಿ ಕುಸಲ್ವರಸೆ ನವೀನ್ ಡಿ ಪಡೀಲ್, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ರೋಶನ್ ವೇಗಸ್, ಶ್ರದ್ಧಾಸಾಲಿಯಾನ್, ಪ್ರದೀಪ್ ಚಂದ್ರ ಕುಪ್ಪಾಡಿ, ಹರೀಶ್ ವಾಸು ಶೆಟ್ಟಿ, ಸಾಯಿ ಕೃಷ್ಣ ಕುಡ್ಲ, ಉಮೇಶ್ ಮಿಜಾರ್, ಸುಂದರ್ ರೈ ಮಂದಾರ, ಸಂದೀಪ್ ಶೆಟ್ಟ ಮಾಣಿಬೆಟ್ಟು, ಸರೋಜಿನಿ ಶೆಟ್ಟಿ ಕಾಣಿಸಿ ಕೊಂಡಿದ್ದಾರೆ. ಇನ್ನುಳಿದಂತೆ ಕೋಡ ಪದವು ದಿನೇಶ್ ಶೆಟ್ಟಿ ಗಾರ್, ಪಿಂಕಿ ರಾಣಿ, ಶೇಖರ್ ಭಂಡಾರಿ, ರಘು ಪಾಂಡೇಶ್ವರ್, ಪವಿತ್ರ ಶೆಟ್ಟಿ, ಡಿ.ಬಿ.ಸಿ ಶೇಖರ್, ಸುನಿಲ್ ನೆಲ್ಲಿಗುಡ್ಡೆ, ಕುಶಿ ಶೇಖರ್ ಮೊದಲಾದವರು ಬಣ್ಣ ಹಚ್ಚಿದ್ದಾರೆ.ಇನ್ನು ಚಿತ್ರದ ನಾಯಕ ನಟನಾಗಿ ಮೊಹಮ್ಮದ್ ನಯೀಮ್ ಅವರು ಅಭಿನಯಿಸಿದ್ದರೆ ನಾಯಕಿಯಾಗಿ ಐಶ್ವರ್ಯ ಹೆಗ್ಡೆ ಅವರು ಅದ್ಭುತವಾಗಿ ನಟಿಸಿದ್ದಾರೆ.

ಇನ್ನು ಚಿತ್ರದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಅಗಿ ನಿಕ್ಷಿತ್ ರಾವ್ ಮತ್ತು ನಿಧಿ ರಾವ್ ಕಾರ್ಯ ನಿರ್ವಹಿಸಿದ್ದಾರೆ. ಡಿ.ಬಿ.ಸಿ. ಶೇಖರ್ ಅವರು ಸಂಭಾಷಣೆ ಮತ್ತು ಸಾಹಿತ್ಯವನ್ನು ಬರೆದಿದ್ದು, ಸಚಿನ್ ಶೆಟ್ಟಿ ಕುಂಬ್ಳೆ ಚಿತ್ರಕಥೆಯನ್ನು ಬರೆದಿದ್ದಾರೆ. ಮದನ್ ಹರಿಣಿ ಅವರು ನೃತ್ಯ ನಿರ್ದೇಶನವನ್ನು ಮಾಡಿದ್ದು, ನಾಸಿರ್ ಹಕೀಮ್ ಮುಂಬೈ ಅವರು ಸಂಕಲನವನ್ನು ನಿರ್ವಹಿಸಿದ್ದಾರೆ. ದೇವಿಪ್ರಕಾಶ್ ಕಲೆ, ವಿ ಮನೋಹರ್ ಅವರ ಸಂಗೀತ ಈ ಚಿತ್ರಕ್ಕಿದೆ. ಇನ್ನು ಮಾಸ್ ಮಾದ ಅವರ ಸಾಹಸ ಈ ಚಿತ್ರಕ್ಕಿದ್ದು, ಈ ಸಿನಿಮಾಕ್ಕೆ ವ್ಯಾಸರಾಜ ಸೋಸಲೆ, ಅನುರಾಧ ಭಟ್, ಪ್ರಕಾಶ್ ಮಹಾದೇವನ್, ಸುಹಾನ ಸೈಯ್ಯದ್ ಹಾಡಿದ್ದಾರೆ. ರಾಮ್ ದಾಸ್ ಸಸಿಹಿತ್ಲು ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.ಹಾಸ್ಯಮಯ ಸನ್ನಿವೇಶಗಳೊಂದಿಗೆ ಯಾರದೋ ತಪ್ಪಿಗೆ ಇನ್ಯಾರೋ ಕಿರಿಕಿರಿ ಅನುಭವಿಸುವುದು, ಮಾಡಿದ ತಪ್ಪುಗಳನ್ನ ಸರಿಪಡಿಸಿಕೊಂಡು ಸತ್ಯದ ದಾರಿಯಲ್ಲಿ ಬಾಳುವುದೇ ಜೀವನ ಎಂಬ ಸಂದೇಶವನ್ನು ಸಾರುವ ಕತೆಯನ್ನು ಎರೆಗಾವುಯೆ ಕಿರಿಕಿರಿ ಹೊಂದಿದೆ. ಇಂದು ಸಿನಿಮಾ ಕರಾವಳಿಯಾದ್ಯಂತ ತೆರೆಕಂಡಿದ್ದು, ಸಿನಿಪ್ರೇಕ್ಷಕರು ಇಂದಿನಿಂದ ಸಿನಿಮಾವನ್ನು ವೀಕ್ಷಿಸಬಹುದು.

Related Posts

Leave a Reply

Your email address will not be published. Required fields are marked *

How Can We Help You?