ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ

ವಿಟ್ಲ: ಕಾಂಗ್ರೆಸ್ ಅವನತಿಯತ್ತ ಸಾಗ್ತಿದೆ. ಜನ ಅವರನ್ನು ತಿರಸ್ಕರಿಸಲು ಆರಂಭಿಸಿ ಯಾಗಿದೆ. ದೇಶದಲ್ಲಿ ಕಾಂಗ್ರೆಸ್ ಅಭಿವೃದ್ಧಿಯನ್ನು ಮಾಡುವ ಬದಲು ಭಯೋತ್ಪಾಧನೆ, ಭ್ರಷ್ಟಾಚಾರಗಳನ್ನು ನೀಡಿದೆ. ಮೋದೀಜಿಯವರ ನೇತೃತ್ವದ ಬಿಜೆಪಿ ಸರಕಾರ ಅಭಿವೃದ್ಧಿಯ ಶಖೆಯನ್ನೇ ಆರಂಭಿಸಿದೆ. ಯೋಜನೆಗಳನ್ನು ರೈತರ, ಸಾಮಾನ್ಯ ಜನರ ಮನೆ ಭಾಗಿಲಿಗೆ ತಲುಪಿಸುವ ಕೆಲಸ ಬಿಜೆಪಿ ಸರಕಾರದಿಂದ ಆಗುತ್ತಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಹೇಳಿದರು.

ಅವರು ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ವಿಟ್ಲದಲ್ಲಿ ನಡೆದ ರೊಡ್ ಶೋ ನ ಬಳಿಕ ಕಾರ್ಯಕರ್ತರ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸಲಾರಂಭಿಸಿದೆ. ಕಾಂಗ್ರೆಸ್ ಮನೆ ಖಾಲಿಯಾಗ್ತಿದೆ. ಬಿಜೆಪಿಯ ಮನೆ ಸಂಭ್ರಮದಿಂದ ಕೂಡಿದೆ. ವಿಟ್ಲದ ಕಾಂಗ್ರೆಸ್ ಕಾರ್ಯಾಲಯವೇ ಕಾಲಿಯಾಗ್ತಿದೆ. ಕಳೆದ ಬಾರಿಯಂತೆ ನೀವು ಈ ಭಾರಿಯೂ ನಮಗೆ ಆಶೀರ್ವದಿಸಬೇಕು.ನಿಮ್ಮ ಕನಸನ್ನು ಸಾಕಾರ ಮಾಡಲು ನಮ್ಮ ಕಾರ್ಯಕರ್ತರು ಭದ್ದರಿದ್ದಾರೆ. ನಾವುಗಳು ಸಂಪೂರ್ಣ ಸಹಕಾರ ನೀಡಿ ಈ ಪಟ್ಟಣ ಪಂಚಾಯತ್ ನ್ನು ಸಂಪೂರ್ಣ ಅಭಿವೃದ್ಧಿ ಮಾಡಲಿದ್ದೇವೆ ಎಂದರು.

ಪುತ್ತೂರು ಶಾಸಕರಾದ ಸಂಜೀವ ಮಠಂದೂರುರವರು ಮಾತನಾಡಿ ಬಿಜೆಪಿ ಇವತ್ತು ಪಂಚಾಯತ್ ನಿಂದ ಪಾರ್ಲಿಮೆಂಟ್ ವರೆಗೆ ಆಳ್ವಿಕೆ ನಡೆಸುತ್ತಿದೆ. ಕಳೆದ ಐದು ವರ್ಷದ ಹಲವಾರು ಕೆಲಸ ಕಾರ್ಯಗಳನ್ನು ಮಾಡಿದ್ದೇವೆ. ಬ್ರಷ್ಟಾಚಾರ ಮುಕ್ತ ಆಡಳಿತ ಕೊಟ್ಟಿದ್ದೇವೆ. ಕಾಂಗ್ರೆಸ್ ಅದಪತ್ತನದತ್ತ ಸಾಗುತ್ತಿದೆ. ಕಮಲ ದೇಶದಲ್ಲಿ ಅರಳ್ತಾ ಇದೆ. ಹದಿನೆಂಟು ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದು ನಾವು ಜಿಲ್ಲೆಗೆ ಮಾದರಿಯಾಗಲಿದ್ದೇವೆ. ಬಿಜೆಪಿ ಪಟ್ಟಣ ಪಂಚಾಯತ್ ನ ಭದ್ರ ಕೋಟೆ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಡಬೇಕು. ಇವತ್ತಿನ ಈ ಚುನಾವಣೆ ನಮಗೆ ಅತೀ ಮುಖ್ಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ, ಪ್ರಚಾರ ಸಮಿತಿ ಸಂಚಾಲಕ ಚಣಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ್ ದಾಸ್ ಬಂಟ್ವಾಳ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?