ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಟಗರು ಚಿತ್ರದ ನಾಯಕಿ ಮನ್ವಿತಾ ಭೇಟಿ

ಟಗರು ಚಿತ್ರದ ನಾಯಕಿ ಮನ್ವಿತಾ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ದೇವರ ದರ್ಶನ ಪಡೆದರು. ಳಿಕ ಮಾತನಾಡಿದ ಅವರು, ಪುನೀತ್ ರಾಜ್ ಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ. ಅಪ್ಪು ಇಲ್ಲದೆ ಕನ್ನಡ ಚಿತ್ರರಂಗ ಬಡವಾಗಿದೆ. ಅಪ್ಪು ಯಾವತ್ತೂ ನಮ್ಮ ಜೊತೆಗೆನೇ ಇರುತ್ತಾರೆ.  ಕನ್ನಡ ಚಿತ್ರರಂಗದ ಎಲ್ಲರೂ ಅಪ್ಪು ಅವರನ್ನು ಮಿಸ್ ಮಾಡ್ತಾ ಇದ್ದಾರೆ. ನನ್ನ ಮರಾಠಿ ಚಿತ್ರ ಸದ್ಯದಲ್ಲೇ ರಿಲೀಸ್ ಆಗುವ ಸಾಧ್ಯತೆಯಿದೆ. ಕೋವಿಡ್ ಕಾರಣಕ್ಕೆ ಬಿಡುಗಡೆಯಲ್ಲಿ ಸ್ಪಲ್ಪ ತಡವಾಗಿದೆ. ನನ್ನದೇ ಒಂದು ಪ್ರೋಡಕ್ಷನ್ ಹೌಸ್ ಆರಂಭಿಸುತ್ತಿದ್ದೇನೆ. ಹೈದರಾಬಾದ್‍ನಲ್ಲಿ ಪ್ರೊಡಕ್ಷನ್ ಹೌಸ್ ಕಾರ್ಯಚರಿಸಲಿದೆ. ತುಳುವಿನಲ್ಲಿ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕಿದಲ್ಲಿ ತುಳು ಸಿನಿಮಾದಲ್ಲೂ ನಟಿಸುವೆ ಎಂದು ಮನ್ವಿತಾ ಹರೀಶ್ ಅವರು ಹೇಳಿದರು.

Related Posts

Leave a Reply

Your email address will not be published. Required fields are marked *

How Can We Help You?