ಕನ್ನಡ ಪರ ಹೋರಾಟಕ್ಕೆ ಬೆಂಬಲವಿದೆ- ಶಾಸಕ ಯು.ಟಿ. ಖಾದರ್

ಕನ್ನಡ ಪರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಒಂದು ಭಾಷೆಯನ್ನು ಧ್ವೇಷಿಸಿದ್ರೆ ನಮ್ಮ ಭಾಷೆ ಬೆಳೆಯದು. ನಮ್ಮ ಮಕ್ಕಳಿಗೂ ಹೆಚ್ಚು ಭಾಷೆ ಕಲಿಸುವ ಅಗತ್ಯವಿದೆ. ಪ್ರತಿ ಭಾಷೆಯನ್ನು ಗೌರವದಿಂದ ಕಾಣಬೇಕು ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಹೇಳಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಎಮ್‍ಇಎಸ್ ಸಂಘಟನೆಯ ಬಗ್ಗೆ ಬಿಜೆಪಿಯಷ್ಟು ನಮಗೆ ಗೊತ್ತಿಲ್ಲ. ಒಂದು ಸಮಯದಲ್ಲಿ ಅವರಿಬ್ಬರೂ ಜೊತೆಗಿದ್ದವರು. ಎಮ್‍ಇಎಸ್ ನಿಷೇಧದ ಬಗ್ಗೆ ಪಕ್ಷದ ಅಧ್ಯಕ್ಷ, ವಿಪಕ್ಷ ನಾಯಕರು ತಮ್ಮ ನಿಲುವನ್ನು ತಿಳಿಸಿದ್ದಾರೆ ಎಂದು ಹೇಳಿದರು.

 ಕೇಂದ್ರ ಸರ್ಕಾರದಿಂದ ಮದುವೆ ವಯಸ್ಸು 21ಕ್ಕೆ ಏರಿಸುವ ಪ್ರಸ್ತಾಪ ಕುರಿತು ಮಾತನಾಡಿದ ಅವರು ಇದು ಕೇಂದ್ರ ಸರ್ಕಾರದ ದ್ವಂದ್ವ ಕಾನೂನು. 18 ವರುಷ ಮೇಲ್ಪಟ್ಟರೆ ಸಂಬಂಧವಿಟ್ಟುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. 18 ವರ್ಷ ಮೇಲ್ಪಟ್ಟ ಯುವತಿಗೆ ಲಿವಿಂಗ್ ಟುಗೆದರ್‍ಗೂ ಅವಕಾಶವಿದೆ. ಅಂತಹ ಜೋಡಿಯನ್ನು ತಡೆಯುವ ಅಧಿಕಾರವೂ ಯಾರಿಗೂ ಇಲ್ಲ. ಆದರೆ ಪಾವಿತ್ರ್ಯತೆಯಿಂದ ಮಾಡುವ ಮದುವೆ 21 ಆಗಬೇಕು. ಇದು ಎಂತಹ ಕಾನೂನು ಎಂದು ಶಾಸಕ ಖಾದರ್ ಅವರು ವ್ಯಂಗ್ಯವಾಡಿದರು.

ಮತಾಂತರ ನಿಷೇಧ ಮಸೂದೆಯ ಬಗ್ಗೆ ಮಾತನಾಡಿದ ಖಾದರ್ ಅವರು, ಪಕ್ಷದ ಲಾಭವನ್ನು ನೋಡಿ ಕಾನೂನು ರಚಿಸುತ್ತಿದ್ದಾರೆ. ಮತಾಂತರ ನಿಷೇಧ ಕಾಯ್ದೆಯ ಹಿಂದೆ ದುರುದ್ದೇಶವಿದೆ. ಬಲವಂತದ ಮತಾಂತರಕ್ಕೆ ಯಾರ ಬೆಂಬಲವು ಇಲ್ಲ. ಈ ಕಾಯ್ದೆಯಿಂದ ಜನರಿಗೆ ಯಾವುದೇ ಲಾಭವಿಲ್ಲ. ಬಿಜೆಪಿಯವರು ಮಂಡಿಸಿದ ಮಸೂದೆಗೆ ಕೋರ್ಟ್ ತಡೆ ನೀಡುತ್ತದೆ. ಇದು ಬಿಜೆಪಿ ಪ್ರತಿಯೊಬ್ಬ ಮುಖಂಡರಿಗೂ ತಿಳಿದಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *

How Can We Help You?