ಉಳ್ಳಾಲ : ಕ್ರಿಸ್ಮಸ್ ಸೌಹಾರ್ದ ಕೂಟ “ಬಾಂಧವ್ಯ” ಕಾರ್ಯಕ್ರಮ

ಉಳ್ಳಾಲ. ಕಥೊಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ಭಾರತೀಯಾ ಕಥೊಲಿಕ್ ಯುವ ಸಂಚಾಲನ ರಾಣಿಪುರ ಘಟಕ ವತಿಯಿಂದ ಕ್ರಿಸ್ಮಸ್ ಸೌಹಾರ್ದ ಕೂಟ  “ಬಾಂಧವ್ಯ” ಕಾರ್ಯಕ್ರಮ ರಾಣಿಪುರ ಮೇರಿ ವಿಶ್ವಮಾತೆ ದೇವಾಲಯದ ಸಭಾಂಗಣದಲ್ಲಿ ನಡೆಯಿತು.

ಮಾಜಿ ಶಾಸಕ ಜಯರಾಮ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ರಿಸ್ಮಸ್ ಹಬ್ಬದ ಹೆಸರಿನಲ್ಲಿ ಇಂದು ಇಲ್ಲಿ ಎಲ್ಲರೂ ಒಟ್ಟಾಗಿದ್ದೇವೆ. ಏಸು ಕ್ರಿಸ್ತ ಈ ಜಗತ್ತಿನ ಅದ್ವಿತೀಯ ನಾಯಕ. ಅವರ ಶಾಂತಿಯ ಸಂದೇಶಗಳಿಗೆ ಜಗತ್ತಿನ ಹಲವರು ಪ್ರಭಾವಿತರಾಗಿದ್ದಾರೆ. ಯಾಕೆಂದರೆ ತನ್ನನ್ನು ಶಿಲುಬೆಗೇರಿಸಿದವರನ್ನೇ ಕ್ಷಮಿಸಿದ ಅತ್ಯಂತ ಮಹಾನ್ ದಾರ್ಶನಿಕರಾಗಿದ್ದಾರೆ ಏಸುಕ್ರಿಸ್ತ. ಈ ಸೌಹಾರ್ದ ಸಂಗಮದ ಮೂಲಕ ನಾವೆಲ್ಲರೂ ಒಂದಾಗಿದ್ದೇವೆ. ಇದು ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಮಂಗಳೂರಿನ ಬದ್ರಿಯ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲಾ ಡಾ. ಇಸ್ಮಾಯಿಲ್ ಎನ್ ಮುಖ್ಯ ಅತಿಥಿಯಾಗಿ ಭಾಗವಹಸಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಈ ಬಾಂಧವ್ಯ, ಸೌಹಾರ್ದ ಮೊದಲಾದ ಪದಗಳು ಕೇವಲ ಪದಗಳಾಗಿಯೇ ಉಳಿದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮಾನವರೆಲ್ಲರೂ ಒಂದೇ ಎಂಬ ಭಾವನೆಗಳಿದ್ದ ಸಂದರ್ಭದಲ್ಲಿ ಸೌಹಾರ್ಧತೆ ಪಾಠದ ಅಗತ್ಯವಿರಲಿಲ್ಲ ಇಂದು ನಮ್ಮೊಳಗೆ ಧರ್ಮದ ಅಂತರಗಳು ನುಸುಳಿದ್ದರಿಂದ ಈ ರೀತಿಯ ಬಾಂಧವ್ಯದ ಅಗತ್ಯತೆ ಇದೆ ಎಂದರು. ನಾವೆಲ್ಲರೂ ಸೇರಿ ಸೌಹಾರ್ದತೆಯನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದರು.

ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಫ್ರಾಡ್ ಡಿಸೋಜಾ, ರಾಣಿಪುರ ಖುಷಿವನದ ನಿರ್ದೇಶಕ ಫಾ.ಅರ್ಚಿ ಬಾಲ್ಡ್ ಗೊನ್ಸಾಲ್ವಿಸ್, ರಾಣಿಪುರ ಮೇರಿ ವಿಶ್ವಮಾತೆ ದೇವಾಲಯದ ಧರ್ಮಗುರು ಫಾ. ಜಯಪ್ರಕಾಶ್ ಡಿ’ಸೋಜಾ, ಐಸಿವೈಎಂ ರಾಣಿಪುರ ಅಧ್ಯಕ್ಷ ರೋಯ್ಸ್ ಟನ್ ಡಿಸೋಜಾ,ಕಾರ್ಯಕ್ರಮ ಸಂಚಾಲಕ ಫೆಲಿಕ್ಸ್ ಮೊಂತೆರೊ, ಕಥೋಲಿಕ್ ಸಭಾ ರಾಣಿಪುರ ಘಟಕ ಕಾರ್ಯದರ್ಶಿ ಎಮಿಲಿಯಾನಾ ಗೊನ್ಸಾಲ್ವಿಸ್,  ಕಾರ್ಯಕ್ರಮ ಸಹ ಸಂಚಾಲಕ ಹೆರಾಲ್ಡ್ ಲೋಬೋ , ಕಥೊಲಿಕ್ ಸಭಾ ರಾಣಿಪುರ ಘಟಕ ಅಧ್ಯಕ್ಷ ನವೀನ್ ಡಿಸೋಜಾ, ಐಸಿವೈಎಂ ರಾಣಿಪುರ ಘಟಕ ಕಾರ್ಯದರ್ಶಿ ರೆನಿಟಾ ಫಿಗ್ರೆಡೊಉಪಸ್ಥಿತರಿದರು.

Related Posts

Leave a Reply

Your email address will not be published.

How Can We Help You?