ಕುಲಶೇಖರ ವೀರನಾರಾಯಣ ದೇವಸ್ಥಾನ-ಶ್ರೀದೇವರ ಬಿಂಬ ಬಾಲಾಲಯದಲ್ಲಿ ಪ್ರತಿಷ್ಠೆ ಪ್ರಯುಕ್ತ ಅಖಂಡ ಭಜನೆಗೆ ಚಾಲನೆ

ಮಂಗಳೂರು: ಕುಲಶೇಖರ  ಶ್ರೀ ವೀರನಾರಾಯಣ ದೇವಸ್ಥಾನ  ಇದರ ಜೀರ್ಣೋದ್ಧಾರದ ಅಂಗವಾಗಿ ಡಿಸೆಂಬರ್ 26ರಂದು ಶ್ರೀ ವೀರನಾರಾಯಣ ದೇವರ ಬಿಂಬ  ಬಾಲಾಲಯದಲ್ಲಿಪ್ರತಿಷ್ಠೆಯ ಪೂರ್ವಭಾವಿಯಾಗಿ ಡಿ 24ರಂದು ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಜರಗುವ ಭಜನಾ ಕಾರ್ಯಕ್ರಮವನ್ನು ಮಾಣಿಲದ ಶ್ರೀಧಾಮದ ಶ್ರೀ ಪರಮಹಂಸ  ಮೋಹನದಾಸ  ಸ್ವಾಮೀಜಿಯವರು ಕ್ಷೇತ್ರದ ದೇವರನ್ನು ಪ್ರಾರ್ಥಿಸಿ ಬೆಳಿಗ್ಗೆ    ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ಬೆಳಿಗ್ಗೆ ದೇವಸ್ಥಾನದ ತಂತ್ರಿ ಗಳಾಗಿರುವ ಅನಂತ ಉಪಾಧ್ಯಾಯರು ಅವರ ಮಾರ್ಗದರ್ಶನದಂತೆ ಪ್ರಧಾನ ಅರ್ಚಕರು ಜನರ್ಧನ್ ಭಟ್ ಅವರು ಶ್ರೀದೇವರಿಗೆ ವಿಶೇಷ ಪೂಜೆ ನಡೆಸಿದರು.

       ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲ ಸಂಘದ ಅಧ್ಯಕ್ಷ ಮಯೂರ ಉಳ್ಳಾಲ, ಪುರುಷೋತ್ತಮ್ ಕುಲಾಲ್  . ಕಲ್ಬಾವಿ.(ಆಡಳಿತ ಮೊಕ್ತೇಸರರು. )ಎ. ದಾಮೋದರ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ ಬಿ ಪ್ರೇಮಾನಂದ ಕುಲಾಲ್ ಕಾರ್ಯಧ್ಯಕ್ಷರು ಶ್ರೀ ವೀರನಾರಾಯಣ ಸೇವಾ ಟ್ರಸ್ಟ್..ಸುಂದರ ಕುಲಾಲ್ ಶಕ್ತಿನಗರ ಅಧ್ಯಕ್ಷರು ವೀರನಾರಾಯಣ ಸೇವಾ ಸಮಿತಿ, ದೇವಸ್ಥಾನದ ಮಹಿಳಾ  ವಿಭಾಗದ ಕಾರ್ಯಧ್ಯಕ್ಷೆ ಗೀತಾ ಮನೋಜ್ ..ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಸಾಲ್ಯಾನ್ . ಹಾಗೂ ದಯಾನಂದ ಅಡ್ಯಾರ್ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಎಂ ಪಿ ಬಂಗೇರ . ಸಂಚಾಲಕ.. ಸುರೇಶ್ ಕುಲಾಲ್ ಮಂಗಳದೇವಿ . ಸಂಘದ ಸೇವಾದಳದ  ದಳಪತಿ  ಕಿರನ್ ಅಟ್ಲೂರು . ಉದ್ಯಮಿ ಅನಿಲ್ ದಾಸ್.  ಭಜನಾ ಸಮಿತಿಯ ಚಂದ್ರಹಾಸ್ ಕುಲಾಲ್ ಪ್ರಚಾರ ಸಮಿತಿಯ ಗಿರಿಧರ್ ಜೆ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬೆಳಿಗ್ಗಿನಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಡಿ 26 ರಂದು ಬೆಳಗ್ಗೆ 10 ಗಂಟೆಗೆ  ಶ್ರೀ ವೀರನಾರಾಯಣ ದೇವರ ಬಿಂಬ  ಬಾಲಾಲಯದಲ್ಲಿಪ್ರತಿಷ್ಠೆ  ನಡೆಯಲಿದೆ.

Related Posts

Leave a Reply

Your email address will not be published. Required fields are marked *

How Can We Help You?