ಕಾರ್ಕಳ ಪುರಸಭೆ ವ್ಯಾಪ್ತಿಯ ಕಾಲೋನಿಗಳ ಅಭಿವೃದ್ಧಿ: ಸಚಿವ ಸುನಿಲ್ ಕುಮಾರ್ ರಿಂದ ಗುದ್ದಲಿಪೂಜೆ

ಕಾರ್ಕಳ: ಕರ್ನಾಟಕ ಸರ್ಕಾರದ ಇಂಧನ ಹಾಗೂ ಕನ್ನಡ ಹಾಗೂ ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ್ ರವರು ಪುರಸಭೆ ವ್ಯಾಪ್ತಿಯ ಕಾಲೋನಿಗಳ ಅಭಿವೃದ್ಧಿಗಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ನಿಧಿಯಿಂದ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಿ ಕಾರ್ಕಳ ದಾನ ಶಾಲೆ ಕಾಲೊನಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಬೇಕು. ಇನ್ನು ಈ ಕಾಲೋನಿ ಗೆ ಹೋಗುವ ರಸ್ತೆ ಕಾಂಕ್ರೀಟಿಕರಣ ಆಗಬೇಕು,  ಚರಂಡಿ ವ್ಯವಸ್ಥೆ ಆಗಬೇಕು ಕಾರ್ಕಳ ತಾಲೂಕಿನ ಇಂಥ ಎಲ್ಲ ಕಾಲೊನಿ  ಎಲ್ಲೆಲ್ಲಿವೆ ಅದು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಆಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸಮಾವೇಶ ಪುರಸಭೆ ಮುಖ್ಯಧಿಕಾರಿ ರೂಪ ಶೆಟ್ಟಿ, ಪುರ ಸಭೆ ಸದಸ್ಯರಾದ ವಿನ್ನಿಬೋಲ್ಡ್, ಯೋಗೀಶದೇವಾಡಿಗ, ಪ್ರದೀಪ್ ರಾನೆ, ಭಾರತಿ, ಪ್ರಸನ್ನ ಇನ್ನಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?