ವಿಟ್ಲ ಪಟ್ಟಣ ಪಂಚಾಯತ್‍ಗೆ ಚುನಾವಣೆ : 18 ವಾರ್ಡುಗಳಲ್ಲಿ ಮತದಾನ

ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿಯ 18  ವಾರ್ಡುಗಳಿಗೆ ಚುನಾವಣೆ ಇಂದು  ನಡೆಯುತ್ತಿದ್ದು, ಬೆಳಿಗ್ಗೆನಿಂದಲೇ ಮತದಾರರು ಉತ್ಸಹದಿಂದ ಬಂದು ಮತ ಚಲಾಯಿಸುತ್ತಿದ್ದಾರೆ.ವಿಟ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಒಕ್ಕೆತ್ತೂರು ಸರ್ಕಾರಿ ಶಾಲೆ, ವಿಠಲ ಪದವಿ ಪೂರ್ವ ಕಾಲೇಜು, ಮೇಗಿನ ಪೇಟೆ, ಮತಗಟ್ಟೆಯಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದೆ. ಬೆಳಿಗ್ಗೆ 10 ಗಂಟೆ ವೇಳೆ ಶೇ.20 ಮತದಾನವಾಗಿದೆ. ಪಟ್ಟಣ ಪಂಚಾಯಿತಿ ಚುನಾವಣೆಗೆ ವಿದ್ಯುತ್ ಚಾಲಿತ ಮತಯಂತ್ರಗಳನ್ನು ಬಳಸಿಕೊಳ್ಳಲಾಗಿದ್ದು, ಅಗತ್ಯ ವ್ಯವಸ್ಥೆಗಳನ್ನು 18ವಾರ್ಡ್ ನ ಮತಗಟ್ಟೆಯಲ್ಲಿ ಮಾಡಲಾಗಿದೆ. ಪ್ರತಿ ಮತಗಟ್ಟೆಗೆ 4ಅಧಿಕಾರಿಗಳು, ಓರ್ವ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. 8 ವಾಹನಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿದೆ.

42 ಮಂದಿ ಅಭ್ಯರ್ಥಿಗಳು ಕಣದಲ್ಲಿರುವ ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ. ಎಸ್.ಡಿ.ಪಿ.ಐ. ಕೆಲ ವಾರ್ಡ್ ಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದಿದೆ. ಇಬ್ಬರು ಪಕ್ಷೇತರರೂ ಕಣದಲ್ಲಿದ್ದಾರೆ. 7191 ಮಂದಿ ಪುರುಷ ಮತದಾರರು, 7554 ಮಂದಿ ಮಹಿಳಾ ಮತದಾರರು ಸೇರಿದಂತೆ 14,71514 ಮಂದಿ ಮತದಾರರಿದ್ದು, 18 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಕಾರ್ಯಕ್ಕೆ ಸಂಬಂಧಿಸಿದಂತೆ ಪಿಆರ್‍ಒ, ಎಪಿಆರ್‍ಒ ಹಾಗೂ ಪಿಒ ಸಹಿತ ಒಟ್ಟು 88 ಮಂದಿ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

Related Posts

Leave a Reply

Your email address will not be published. Required fields are marked *

How Can We Help You?