ಪಿಂಗಾರ ಸಾಹಿತ್ಯ ಬಳಗದ ಕ್ರಿಸ್ಮಸ್ ಬಹುಭಾಷಾ ಕವಿಗೋಷ್ಠಿ

 ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ಕೇಕ್ ನ್ನು ಮುಖ್ಯ ಅತಿಥಿಯಾದ ಮಂಗಳೂರಿನ ಅಭಿಮೊ ಟೆಕ್ನಾಲಜೀ ಮುಖ್ಯಸ್ಥ ಉಳ್ಳಾಲದ ನವೀನ್ ನಾಯಕ್ ಮತ್ತು ಪಿಂಗಾರ ಪತ್ರಿಕೆಯ ಮುಖ್ಯಸ್ಥ ರೇಮಂಡ್ ಡಿ ಕುನ್ಹ, ಕಥಾ ಬಿಂದು ಪ್ರಕಾಶನದ ಪಿ.ವಿ ಪ್ರದೀಪ್ ಕುಮಾರ್ ,ಕವಿಗೋಷ್ಠಿಯ ಅಧ್ಯಕ್ಷ ವೆಂಕಟೇಶ ಗಟ್ಟಿ ಹಾಗೂ ಸಂಚಾಲಕ ಡಾ ಸುರೇಶ್ ನೆಗಳಗುಳಿ ಸಹಿತವಾಗಿ ಜಂಟಿಯಾಗಿ ಕತ್ತರಿಸಲಾಯಿತು ಅನಂತರ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ದಾಖಲೆಯ ಎಂಟು ಭಾಷೆಗಳ ಕವನಗಳು ವಾಚಿಸಲ್ಪಟ್ಟವು.

ಡಾ ವಾಣಿಶ್ರೀ ಕಾಸರಗೋಡು , ಲಕ್ಷ್ಮಿ ಬಿ ಎಸ್ ಹಿತೇಶ್ ಕುಮಾರ್ ನೀರ್ಚಾಲ್,ಮಂಜುಶ್ರೀ ನಲ್ಕ, ಡಾ ಸುರೇಶ ನೆಗಳಗುಳಿ ಮಂಗಳೂರು, ಗುರುರಾಜ್ ಎಂ ಆರ್,ರೇಖಾ ಸುದೇಶ್ ರಾವ್, ರೇಮಂಡ್ ಡಿ ಕುನ್ಹ,ಜಯಾನಂದ ಪೆರಾಜೆ,,ರಶ್ಮಿ ಸನಿಲ್,ದೀಪಾ ಪಾವಂಜೆ,ಚಂದನಾ ಕಾರ್ತಟ್ಟು,,ಲಕ್ಷ್ಮಿ ಬಿಎನ್,ಸುಹಾನ ಸಮೀರ್,ಅರ್ಚನಾ ಕುಂಪಲಪ್ರಕಾಶ ಪಡಿಯಾರ ಕುಂದಾಪುರ,ಸೌಮ್ಯ ಆರ್ ಶೆಟ್ಟ,ಜಯಲಕ್ಷ್ಮಿ ಶರತ್ ಶೆಟ್ಟಿ ಕತ್ತರಿ ಕೋಡಿ,ನವ್ಯ ಪ್ರಸಾದ್ ನೆಲ್ಯಾಡಿ , ಶರಣ್ಯ ಬೆಳುವಾಯಿ,ಅಶ್ವಿನಿ ಕಡ್ತಲ,ಮನ್ಸೂರು ಮುಲ್ಕಿ, ಶಾಂತಾ ಪುತ್ತೂರು,ಸೋಮಶೇಖರ ಹಿಪ್ಪರಗಿ,,ಸಂತೋಷ ಟಿ,ಗಂಗಾಧರ ಗಾಂಧಿ ,ರಾಣಿ ಪುಷ್ಪಲತಾ,ಕುಮುದಾ ಬಿ.ಅರ್ಬನ್ ಡಿ ಸೋಜ,ಗೀತಾ ಲಕ್ಷ್ಮೀಶ್ ಅನುರಾದಾ ರಾಜೀವ್,ಸಹಿತ ಹಲವರು ಎಂಟು ಭಾಷೆಯ ಕವನಗಳನ್ನು ವಾಚಿಸಿದರು.

ಬಳಿಕ ಅಧ್ಯಕ್ಷ ಪೀಠದಿಂದ ಮಾತನಾಡುತ್ತ ವೆಂಕಟೇಶ ಗಟ್ಟಿಯವರು ಕಾವ್ದದ ರಚನೆಯು ಭಾವನೆಯೊಡನೆ ಸಮಾನುಪಾತದಲ್ಲಿದೆ ಕಾವ್ಯವಾಗಲು ಕವಿಯು ಭಾವನೆಯ ಒಳಹೊಕ್ಕು ಕವನದ ಚೀಲವನ್ನು ತುಂಬಿಸಿ ಉತ್ತಮ ಶಿರೋನಾನೆಯಿಂದ ಕಟ್ಟ ಬೇಕು.ಅದು ಭದ್ರ ಮತ್ತು ಜನಹಿತವಾಗಿರುತ್ತದೆ ಎನ್ನುತ್ತಾ ಕವಿಗಳ ಕವನದ ಬಗೆಗೆ ಸದಾಶಯ ವ್ಯಕ್ತ ಪಡಿಸಿ ತಮ್ಮ ಸ್ವರಚಿತ ಕವನ ವಾಚಿಸಿದರು.ಮುಂದುವರಿದು ಸಾಹಿತ್ಯದೊಡನಿರುವ ಅವರ ಸಂಬಂಧ ವನ್ನು ಎಳೆ ಎಳೆಯಾಗಿ ಅನಾವರಣ ಮಾಡಿದರು.ಪಿ.ವಿ ಪ್ರದೀಪ್ ಕುಮಾರ್ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಕೊನೆಗೊಂಡ ಕಾರ್ಯಕ್ರಮದ ಪೂರ್ಣ ನಿರ್ವಹಣೆಯನ್ನು ವಿಶಿಷ್ಟ ರೀತಿಯಲ್ಲಿ ಡಾ ಸುರೇಶ್ ನೆಗಳಗುಳಿಯವರು ನಿರ್ವಹಿಸಿದರು.

Related Posts

Leave a Reply

Your email address will not be published. Required fields are marked *

How Can We Help You?