ಕುಂಜತ್ತೂರು ರಸ್ತೆ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ

ಮಂಜೇಶ್ವರ :ಮಂಜೇಶ್ವರ ಗ್ರಾ. ಪಂ. 21 ಹಾಗೂ 1 ನೇ ವಾರ್ಡನ್ನು ಸಂಪರ್ಕಿಸುವ ಕುಂಜತ್ತೂರು ಮಾಸ್ಕೋ – ಕಣ್ವತೀರ್ಥ ರಸ್ತೆ ಈ ರಸ್ತೆಗೆ ಕಳೆದ ಮೂರು ವರ್ಷಗಳಿಂದ ಗ್ರಹಣ ಹಿಡಿದಿದೆ ಎಂದರೆ ತಪ್ಪಾಗಲ್ಲ. ಯಾಕಂದ್ರೆ, ಈ ರಸ್ತೆ ದುರಸ್ಥಿ ಆಗುತ್ತದೆಂದು ಕಾದು ಕುಳಿತು ವರ್ಷಗಳೇ ಉರುಳುತ್ತಿವೆ. ರಸ್ತೆ ದುರಸ್ಥಿಗಾಗಿ ಹಣ ಮಂಜೂರಾಗಿದ್ದರು ಅರ್ಧಂಬರ್ಧ ಕಾಮಗಾರಿಯಲ್ಲಿ ಅರ್ಧಕ್ಕೆ ನಿಂತು ಹೋದ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲವೆಂಬುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಈಗಾಗಲೇ ಈ ರಸ್ತೆಯ ದುರಸ್ಥಿಗಾಗಿ ತಂದು ಇಳಿಸಿದ ಜಲ್ಲಿ ಹಾಗೂ ಇತರ ಸಾಮಾಗ್ರಿಗಳು ಹಲವರ ಪಾಲಾಗಿದೆ ಈ ಬಗ್ಗೆ ಸಂಬಂಧಪಟ್ಟ ಎರಡೂ ವಾರ್ಡ್ ಸದಸ್ಯರಲ್ಲಿಯೂ ಸ್ಥಳೀಯರು ವಿನಂತಿಸಿಕೊಂಡರೂ ಇಲ್ಲ ಸಲ್ಲದ ಕಾರಣವನ್ನು ಮುಂದಿಟ್ಟು ಕಣ್ಮರೆಯಾಗುತ್ತಿರುವುದಾಗಿ ಊರವರು ಹೇಳುತ್ತಿದ್ದಾರೆ.

ಕುಂಜತ್ತೂರು ಬಸ್ ನಿಲ್ದಾಣ ಹಿಂಭಾಗದಲ್ಲೇ ಹಾದು ಹೋಗಿದೆ ಈ ರಸ್ತೆ. ಈ ರಸ್ತೆಯನ್ನು ದುರಸ್ತಿಗೊಳಿಸಿ ಸುಗಮ ರಸ್ತೆ ಸಂಚಾರಕ್ಕೆ ಈ ಹಿಂದೆಯೇ ಪಂ. ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಕಳೆದ ವರ್ಷ ಇದಕ್ಕೆ ಚಾಲನೆಯನ್ನು ನೀಡಿದ್ದರೂ ಬಳಿಕ ಅರ್ಧದಲ್ಲೇ ನಿಂತು ಹೋಗಿರುವುದಾಗಿ ಹೇಳಲಾಗುತ್ತಿದೆ.

ರಸ್ತೆ ಕಾಮಗಾರಿ ಇನ್ನು ಅರಂಭವಾಗಿಲ್ಲ. ಈ ರಸ್ತೆಯಲ್ಲಿ ಬೃಹತ್ತಾಕಾರ ಡಾ ಹೊಂಡಗಳು ಸೃಷ್ಟಿಯಾಗಿದ್ದು, ಹೀಗಾಗಿ ಇಲ್ಲಿನ ನಿವಾಸಿಗಳು ಓಡಾಡಲು ತೊಂದರೆ ಪಡುವಂತಾಗಿದೆ. ಅಲ್ಲದೇ, ಈ ರಸ್ತೆ ಧೂಳಿನಿಂದ ಕೂಡಿದ್ದು, ಜನರು ಪರಿತಪಿಸುವಂತಾಗಿದೆ. ವೃದ್ದರು, ಗರ್ಭಿಣಿಯರು ಹಾಗು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಕುಟುಂಬಗಳು ಆಶ್ರಯಿಸುತ್ತಿರುವ ಈ ರಸ್ತೆಯಲ್ಲಿ ಆಟೋ ರಿಕ್ಷಾಗಳು ಕೂಡಾ ಸಂಚರಿಸಲು ಹಿಂದೇಟು ಹಾಕುತ್ತಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಇದ್ಕಕೊಂಡು ಪರಿಹಾರವನ್ನು ಕಾಣದೆ ಇದ್ದರೆ ಜನವರಿ 10 ರಂದು ಪಂ. ಕಚೇರಿ ಮುಂಬಾಗದಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸಲಿರುವುದಾಗಿ ಊರವರು ಎಚ್ಚರಿಕೆಯಾ ಕರೆ ಘಂಟೆ ಭಾರಿಸಿದ್ದಾರೆ.

Related Posts

Leave a Reply

Your email address will not be published.

How Can We Help You?