ಪುತ್ತೂರಿನ ಬಪ್ಪಳಿಗೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ

ಪುತ್ತೂರಿನ ಬಪ್ಪಳಿಗೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಅದನ್ನು ಯುವಕರ ತಂಡವೊಂದು ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ನಡೆದಿದೆ.

ನಾಳೆ ಉಪನಯನ ನಡೆಯಲಿರುವ ಲಕ್ಷ್ಮೀಶ ಬಪ್ಪಳಿಗೆಯವರ ಮನೆಯ ಸಮೀಪದ ರಸ್ತೆಯಲ್ಲಿ ಈ ಹೆಬ್ಬಾವು ಮಂಗಳವಾರ ರಾತ್ರಿ ಕಾಣಿಸಿಕೊಂಡಿತ್ತು.ಇದನ್ನು ಸ್ಥಳೀಯ ನಿವಾಸಿ ರಾಜೇಶ್ ಅವರು ಗಮನಿಸಿ ಲಕ್ಷ್ಮೀಶರವರಿಗೆ ತಿಳಿಸಿದ್ದಾರೆ. ಬಳಿಕ ರಾಜೇಶ್ ಅವರು ಆ ಹೆಬ್ಬಾವನ್ನು ಹಿಡಿದಿದ್ದು ಅವರಿಗೆ ವಿ 4 ಚಾನೆಲ್ ವರದಿಗಾರ ಅನೀಶ್ ಮರೀಲ್ , ಲಕ್ಷ್ಮೀಶ ಬಪ್ಪಳಿಗೆ  ಹಾಗೂ ಅವರ ಮಗ ಛತ್ರಪತಿ ಬಪ್ಪಳಿಗೆ ಸಹಕರಿಸಿದ್ದಾರೆ

. ವಿಶೇಷವೆಂದರೆ  ನಾಳೆ ಛತ್ರಪತಿಯವರ ಉಪನಯನ ಕಾರ್ಯಕ್ರಮವನ್ನು ಅವರ  ಮನೆಯಲ್ಲಿ ಆಯೋಜಿಸಲಾಗಿತ್ತು. ಇದರ ಸಿದ್ದತೆಯಲ್ಲಿ ಮನೆಯವರು ತೊಡಗಿಸಿಕೊಂಡಿದ್ದಾಗ ಈ ಅಪರೂಪದ ಅತಿಥಿ ಹೆಬ್ಬಾವು ಎಂಟ್ರಿ ಕೊಟ್ಟಿದೆ. ಸುಮಾರು 7  ಅಡಿ ಉದ್ದವಿದ್ದ ಆ ಹೆಬ್ಬಾವನ್ನು ಗೋಣಿ ಚೀಲದಲ್ಲಿ ತುಂಬಿಸಿ ಬಳಿಕ ಪಾಣಾಜೆ ಸಮೀಪ ಕಾಡಿನಲ್ಲಿ ಸುರಕ್ಷಿತವಾಗಿ ಬಿಡಲಾಯಿತು.

Related Posts

Leave a Reply

Your email address will not be published. Required fields are marked *

How Can We Help You?