ಎ.ವಿ.ಆರ್. ಸ್ವರ್ಣ ಮಹಲ್ ಜುವೆಲ್ಲರಿ ಸಂಸ್ಥೆ : “ ದಿ ರೀಗಲ್ ಶೋ” ಆಭರಣ ಮೇಳ

ಬೆಂಗಳೂರು, ಡಿ, 29; ಹೊಸ ವರ್ಷದ ಶುಭಾರಂಭಕ್ಕಾಗಿ ಎ.ವಿ.ಆರ್. ಸ್ವರ್ಣ ಮಹಲ್ ಜುವೆಲ್ಲರಿ ಸಂಸ್ಥೆಯಿಂದ ರಾಜಮನೆತನವನ್ನು ಪ್ರತಿಬಿಂಬಿಸುವ ಆಧುನಿಕ ವಿನ್ಯಾಸದ ಆಭರಣ ಮೇಳ “ ದಿ ರೀಗಲ್ ಶೋ” ನಗರದಲ್ಲಿ ಆರಂಭವಾಗಿದೆ.

ಜಯನಗರ ಮತ್ತು ಡಿಕನ್ ಸನ್ ರಸ್ತೆಯ ಎ.ವಿ.ಆರ್ ಸ್ವರ್ಣ ಮಹಲ್ ಆಭರಣ ಮಳಿಗೆಗಳಲ್ಲಿ ರಾಜಮನೆತನದ ವೈಭವದ ಆಭರಣಗಳನ್ನು ಜನ ಸಾಮಾನ್ಯರು ಸಹ ಕಣ್ತುಂಬಿಕೊಳ್ಳಲು. ರಾಜಪರಂಪರೆಯ ಸ್ಪರ್ಷ ನೀಡಿರುವ ವಡವೆಗಳನ್ನು ಸಂಭ್ರಮದಿಂದ ಖರೀದಿಸಿ ತಮ್ಮದಾಗಿಸಿಕೊಳ್ಳಲು ಇದು ವೇದಿಕೆಯಾಗಿದೆ.

ಹೊಸ ವರ್ಷದಲ್ಲಿ ಹೊಸ ವಿನ್ಯಾಸಗಳನ್ನು ಪರಿಚಯಿಸಲಾಗುತ್ತಿದೆ. ಎ.ವಿ.ಆರ್. ಸ್ಟುಡಿಯೋದಲ್ಲಿ ವಿನ್ಯಾಸಗೊಳಿಸಿರುವ ನವನವೀನ ಆಭರಣಗಳನ್ನು ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಗುತ್ತಿದೆ.

ಎ.ವಿ.ಆರ್. ಸ್ವರ್ಣ ಮಹಲ್ ಆಭರಣ ಸಂಸ್ಥೆ 94 ವರ್ಷಗಳ ಭವ್ಯ ಪರಂಪರೆ ಹೊಂದಿದ್ದು, ಇದೀಗ ಸ್ವರ್ಣ ಮಹಲ್ ನ ಐದನೇ ತಲೆಮಾರಿನ ಕುಟುಂಬ ದೃಡೀಕೃತ, ಶುದ್ಧತೆ ಮತ್ತು ಕುಶಲ ಕಲೆಗೆ ಹೆಸರಾದ ಆಭರಣಗಳ ಮಾರಾಟದಲ್ಲಿ ತೊಡಗಿದೆ. ದಕ್ಷಿಣ ಭಾರತದಲ್ಲಿ 16 ಆಭರಣ ಮಳಿಗೆಗಳನ್ನು ಹೊಂದಿರುವ ಎ.ವಿ.ಆರ್. ಸ್ವರ್ಣ ಮಹಲ್ ಚಿನ್ನ, ಬೆಳ್ಳಿ, ವಜ್ರ ಮತ್ತು ಪ್ಲಾಟಿನಂ ಆಭರಣ ಮಾರಾಟದಲ್ಲಿ ತನ್ನದೇ ವೈಶಿಷ್ಟ್ಯತೆಯನ್ನು ಕಾಯ್ದುಕೊಂಡಿದೆ ಎಂದು ಐದನೇ ತಲೆಮಾರಿನ ನಿರ್ದೇಶಕ ಎ.ವಿ.ಆರ್. ಸಿದ್ಧಾರ್ಥ್ ಹೇಳಿದ್ದಾರೆ.

ಭಾರತೀಯ ಪರಂಪರೆ ಮತ್ತು ಮೌಲ್ಯಗಳೊಂದಿಗೆ ಮಿಳಿತವಾಗಿರುವ “ಅನನ್ಯ” ವಿನ್ಯಾಸ, ಇದೇ ಮೊದಲ ಬಾರಿಗೆ ರೋಸೆಟ್ ವಿಕ್ಟೋರಿಯನ್ ಯುಗದಿಂದ ಪ್ರೇರಿತವಾದ ದೈನಂದಿನ ಸಮಕಾಲೀನ ಮತ್ತು ಹಗುರವಾದ ರೋಸ್ ಕಟ್ ನಿಂದ ತಯಾರಿಸಲಾದ “ರೊಸೆಟ್ಟೆ” ವಿನ್ಯಾಸ ಗಮನ ಸೆಳೆಯುತ್ತದೆ. ಪ್ರತಿಯೊಬ್ಬ ಬಾಲಕಿ ಮತ್ತು ಮಹಿಳೆ ಇಷ್ಟ ಪಡುವ “ಸಿಂಡ್ರೆಲಾ”, ` ಕ್ಯಾರಿಸ್ಸಾ, ಅನ್ ರೌಂಡ್ಸ್, ಕ್ಯಾಂಡಿ, ಅಂತರ, ಮರಿಯಾ, ಮಧುರ, ಆರಾಧನ ವಿನ್ಯಾಸಗಳು ಮತ್ತು ಶೇ 100 ರಷ್ಟು ಮಾಣಿಕ್ಯದಿಂದ ತಯಾರಿಸಲಾದ ಮೊಜಾಂಬಿಕ್ ನ ತಿವೊಲಿ ರುಬಿ ಆಭರಣಗಳು ಸಹ ಆಕರ್ಷಣೀಯವಾಗಿವೆ.

Related Posts

Leave a Reply

Your email address will not be published. Required fields are marked *

How Can We Help You?