ಮೀನು ಹಿಡಿಯಲೆಂದು ಬೋಟ್‍ನಲ್ಲಿ ತೆರಳಿದ್ದ ನಿಲೇಶ್ ನಾಪತ್ತೆ- ದೂರು ದಾಖಲು

ನಿಲೇಶ್ ಎಕ್ಕಾ ಅವರು ಡಿ.26ರಂದು ಮೀನು ಹಿಡಿಯಲೆಂದು 26 ಜನರ ಬೋಟ್‍ನಲ್ಲಿ ತೆರಳಿದ್ದ ವೇಳೆ ನಾಪತ್ತೆಯಾಗಿದ್ದಾರೆ. ಅಳಿವೆ ಬಾಗಿಲು ಮೂಲಕ ಸಮುದ್ರಕ್ಕೆ ಹೋಗಿ ಸುಮಾರು 5 ಕಿಮೀ. ಕ್ರಮಿಸಿದಾಗ ಬೋಟ್‍ನಲ್ಲಿದ್ದ ನಿಲೇಶ್ ಕಾಣೆಯಾಗಿದ್ದು ಗಮನಕ್ಕೆ ಬಂದಿದೆ. ಬೋಟ್ ನಿಲ್ಲಿಸಿ ಎಲ್ಲಾ ಕಡೆ ಹುಡುಕಾಡಿದರೂ ನೀಲೇಶ್ ಎಲ್ಲೂ ಪತ್ತೆಯಾಗಿಲ್ಲ. ಕರಾವಳಿ ಕಾವಲು ಪೊಲೀಸ್ ಮತ್ತು ಇತರ ಕಡೆ ಮಾಹಿತಿಯನ್ನು ಕೊಟ್ಟಿರುತ್ತಾರೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ. ನಿಲೇಶ್ ಎಕ್ಕಾ ಪ್ರಾಯ 32 ವರ್ಷ, ಪತ್ತೆಯಾದಲ್ಲಿ 0824,2220530, 9480805355, 9480805331 ಮಾಹಿತಿಯನ್ನು ನೀಡಬಹುದು.

Related Posts

Leave a Reply

Your email address will not be published.

How Can We Help You?