ಟಿಪ್ಪರ್‌ಗಳ ರಾಂಗ್ ಸೈಡ್ ಓಡಾಟ : ವಿದ್ಯಾರ್ಥಿಗಳಿಗೆ ಪ್ರಾಣ ಸಂಕಟ

ಎರ್ಮಾಳು ಪ್ರದೇಶದ ರಾಷ್ಟ್ರೀಯ ಹೆದ್ದಾರಿರಲ್ಲಿ 66ರಲ್ಲಿ ಬಂಡೆಕಲ್ಲು, ಮಣ್ಣು, ಮರಳು ಸಾಗಿಸುವ ಟಿಪ್ಪರ್ ಗಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಾಂಗ್ ಸೈಡ್ ನಲ್ಲಿ ಎಗ್ಗಿಲ್ಲದೆ ಓಡಾಟ ನಡೆಸುತ್ತಿರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಾಣ ಸಂಕಟ ಅನುಭವಿಸುವಂತ್ತಾಗಿದೆ.

padubidre

ಈ ಬೃಹತ್ ಸಮಸ್ಯೆಯ ಬಗ್ಗೆ ಬಹಳಷ್ಟು ಬಾರಿ ಸುದ್ಧಿ ಬಿತ್ತರಿಸಿ ಎಚ್ಚರಿಸಿದ್ದರೂ ಯಾವುದೇ ಇಲಾಖೆಗಳು ಕ್ರಮಕ್ಕೆ ಮುಂದಾಗದಿರುವುದರಿಂದ ಯಾವುದೇ ಲಂಗು ಲಗಾಮು ಇಲ್ಲದೆ, ಟಿಪ್ಪರ್ ಚಾಲಕರು ಮೊಬೈಲ್ ವಾಹನ ಮಾಡಿಕೊಂಡು ವೇಗವಾಗಿ ಸಂಚಾರಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಗೂಂಡಾಗಳಂತೆ ವರ್ತಿಸುತ್ತಾರೆ ಎಂಬುದು ಸಾರ್ವಜನಿಕರ ಆರೋಪಿಸುತ್ತಿದ್ದಾರೆ. ಶಾಲಾ ವಾಹನಗಳು ಸಂಚರಿಸುವ ಸಂದರ್ಭದಲ್ಲೂ ಟಿಪ್ಪರ್ ಗಳ ರಾಂಗ್ ಸೈಡ್ ಸಂಚಾರ ಅತಿಯಾಗುತ್ತಿದ್ದು, ಮಕ್ಕಳ ಹಿತದೃಷ್ಠಿಯಿಂದಾದರೂ ಪೊಲೀಸ್ ಇಲಾಖೆ ಇಂಥಹ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಜನ ಆಗ್ರಹಿಸಿದ್ದಾರೆ.

Related Posts

Leave a Reply

Your email address will not be published.

How Can We Help You?