ಮೆಹಂದಿ ಕಾರ್ಯಕ್ರಮದಲ್ಲಿ ದೌರ್ಜನ್ಯ ಪ್ರಕರಣ : ಎಮ್‍ಎಲ್‍ಸಿ ಮಂಜುನಾಥ ಭಂಡಾರಿ ಭೇಟಿ, ಸಾಂತ್ವಾನ

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟ ಎನ್ನುವ ಗ್ರಾಮದಲ್ಲಿ ಕೊರಗ(ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಸೇರಿದ ರಾಜೇಶ್ ಎನ್ನುವ ಯುವಕನ ಮದುವೆ (ಮೆಹಂದಿ) ಸಂಭ್ರಮದಲ್ಲಿ ಡಿ.ಜೆ ಹಾಕಿದ್ದರು ಎನ್ನುವ ಕಾರಣಕ್ಕೆ ನಡೆದ ಕೃತ್ಯ ಖಂಡನೀಯ. 

ಈ ಘಟನೆಯಿಂದ ನೊಂದ  ಕೊರಗ ಪರಿವಾರದ  ಮನೆಗೆ ವಿಧಾನ ಪರಿಷತ್ತಿ ಗೆ ನೂತನ ಸದಸ್ಯರಾಗಿ  ಆಯ್ಕೆಯಾದ ಶ್ರೀ ಮಂಜುನಾಥ್ ಭಂಡಾರಿಯವರು ಭೇಟಿ ನೀಡಿ  ಸಾಂತ್ವಾನದ  ಮಾತುಗಳನ್ನಾಡಿ ಘಟನೆಯಿಂದ  ನೊಂದ ಪರಿವಾರಕ್ಕೆ ನ್ಯಾಯ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.

ನಂತರ ಉಡುಪಿ ಜಿಲ್ಲಾ ಪೋಲಿಸ್ ಕಛೇರಿಗೆ ಭೇಟಿ ನೀಡಿ ಘಟನೆಯ ಬಗ್ಗೆ ಸರಿಯಾಗಿ ಪರಿಶೀಲಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕಾಗಿ ಪೋಲಿಸ್ ಆಯುಕ್ತರಲ್ಲಿ ವಿನಂತಿಸಿದರು.  ಈ ಸಮಯದಲ್ಲಿ ಉಡುಪಿ ಜಿಲ್ಲಾ  ಕಾಂಗ್ರೆಸ್  ಅಧ್ಯಕ್ಷರಾದ ಅಶೋಕ್ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು

Related Posts

Leave a Reply

Your email address will not be published.

How Can We Help You?