ಬಿಜೆಪಿ ಸರ್ಕಾರಕ್ಕೆ ಅಧಿಕಾರ ವಿಕೇಂದ್ರೀಕರಣಕ್ಕೆ ಆಸಕ್ತಿ ಇಲ್ಲ : ಯು.ಟಿ. ಖಾದರ್

ಬಿಜೆಪಿ ಸರ್ಕಾರಕ್ಕೆ ಅಧಿಕಾರ ವಿಕೇಂದ್ರೀಕರಣಕ್ಕೆ ಆಸಕ್ತಿ ಇಲ್ಲ, ಅವರದ್ದು ಅಧಿಕಾರ ಕೇಂದ್ರೀಕರಣಗೊಳಿಸುವ ಆಸೆ. ಪ್ರತೀ ಒಂದಕ್ಕೂ ಇವರಿಗೆ ಕೋರ್ಟ್ ಆದೇಶ ಮಾಡಬೇಕು, ಆಸ್ಪತ್ರೆಯಲ್ಲಿ ಬೆಡ್ ಕೊಡಲು ಕೂಡ ಸುಪ್ರೀಂ ಕೋರ್ಟ್ ಹೇಳಬೇಕು ಎಂದು ಮಾಜಿ ಸಚಿವ ಶಾಸಕ ಯು.ಟಿ. ಖಾದರ್ ಹೇಳಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕೋವಿಡ್‍ನಿಂದ ಮೃತ ಹೊಂದಿದವರಿಗೆ ದುಡ್ಡು ಕೊಡಲು ಸುಪ್ರೀಂ ಕೋರ್ಟ್ ಹೇಳಬೇಕು. ಚುನಾವಣೆ ನಡೆಸಬೇಕಿದ್ದರೂ ಇವರಿಗೆ ಕೇಳಬೇಕಿದೆ. ಇವ್ರಿಗೆ ಸರಿಯಾದ ಸಮಯದಲ್ಲಿ ಚುನಾವಣೆ ನಡೆಸಲು ಸಮಸ್ಯೆ ಏನು..? ಎಂದು ಖಾದರ್ ಪ್ರಶ್ನಿಸಿದರು. ಕೋಟೆಕಾರ್ ಚುನಾವಣೆಗೆ ಒಂದುವರೆ ವರ್ಷ ಆಯ್ತು. ಸೋಮೇಶ್ವರ ಸೇರಿದಂತೆ ಬೇರೆ ಪಟ್ಟಣ ಪಂಚಾಯತ್‍ಗಳಿವೆ. ಆ ಪಟ್ಟಣ ಪಂಚಾಯತ್‍ಗಳಿಗೆ ಮೊನ್ನೆಯೇ ಚುನಾವಣೆ ಮಾಡಬಹುದಿತ್ತಲ್ಲ ಎಂದು ಹೇಳಿದರು.

ತೊಕ್ಕೊಟ್ಟುವಿನ ಕುತ್ತಾರು ವರೆಗೆ ರಸ್ತೆ ಅಗಲೀಕರಣ ಕಾಮಗಾರಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಕಾಲೇಜು ಸಂಘ ಸಂಸ್ಥೆಗಳ ಬಸ್ ಸಂಚಾರ ಮಾರ್ಗದಲ್ಲಿ ಬದಲಾವಣೆಗೆ ಸೂಚನೆ ನೀಡಲಾಗಿದೆ. ರಸ್ತೆ ಅಗಲೀಕರಣದಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದೆ. ಮೆಡಿಕಲ್ ಕಾಲೇಜುಗಳ ಹಾಗೂ ಇನ್ಫೋಸಿಸ್ ಬಸ್ ಸಂಚರಿಸುವ ರಸ್ತೆ ಬದಲಾವಣೆ ಮಾಡಲಾಗಿದ್ದು, ರಸ್ತೆ ಕೆಲಸ ಪೂರ್ಣಗೊಳ್ಳುವವರೆಗೆ ಈ ಯೋಚನೆ ಮಾಡಲಾಗಿದೆ ಎಂದು ಹೇಳಿದರು.

Related Posts

Leave a Reply

Your email address will not be published.

How Can We Help You?