ಐಸಿಎಸ್ ಜೊತೆ ನಂಟಿನ ಆರೋಪ :ಮಾಜಿ ಶಾಸಕ ಬಿ.ಎ. ಇದಿನಬ್ಬ ಅವರ ಪುತ್ರನ ಸೊಸೆ ಎನ್ ಐಎ ವಶ

  • ಉಳ್ಳಾಲ ಕ್ಷೇತ್ರದ ಮಾಜಿ ಶಾಸಕ ಬಿ.ಎ. ಇದಿನಬ್ಬ ಅವರ ಪುತ್ರನ ಮನೆ ಮೇಲೆ ಸೋಮವಾರ ಬೆಳಗ್ಗೆ ರಾಷ್ಟ್ರೀಯ ತನಿಖಾ ದಳ(ಎನ್ ಐಎ)ದ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಮಾಜಿ ಶಾಸಕ ದಿ.ಇದಿನಬ್ಬ ಪುತ್ರ ಬಿ.ಎಂ.ಭಾಷಾ ಸೊಸೆ ದೀಪ್ತಿ ಆಲಿಯಾಸ್ ಮರಿಯಂ ಎನ್ ಐಎ ವಶಕ್ಕೆಪಡೆದಿದೆ. ಐಸಿಎಸ್ ಜೊತೆ ನಂಟಿನ ಆರೋಪದ ಹಿನ್ನೆಲೆಯಲ್ಲಿ ಮರಿಯಂ ಬಂಧನವಾಗಿದೆ.

ಎನ್ಐಎ ಸಹಾಯಕ ತನಿಖಾಧಿಕಾರಿ ಕ್ರಿಶ ಕುಮಾರ್ (ಡಿಎಸ್ಪಿ) ಅವರ ನೇತೃತ್ವದ ಅಜಯ್ ಸಿಂಗ್ ಪಿಐ, ಮೋನಿಕಾ ಧಿಕ್ವಾಲ್ ಮತ್ತಿತರ ಎನ್ ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಉಳ್ಳಾಲದ ಮಾಸ್ತಿಕಟ್ಟೆಯ ಮನೆ ಮೇಲೆ ದಾಳಿ ನಡೆಸಿದ ಎನ್ ಐಎ ಅಧಿಕಾರಿಗಳು ಮರಿಯಂ ಅವರನ್ನು ವಶಕ್ಕೆ ಪಡೆದು ಟೆಂಪೋ ಟ್ರಾವೆಲರ್ ವಾಹನದಲ್ಲಿ ಕರೆದೊಯ್ದಿದ್ದಾರೆ.

Related Posts

Leave a Reply

Your email address will not be published. Required fields are marked *

How Can We Help You?