ಕೋವಿಡ್ ಹೆಚ್ಚಳದ ಹೊತ್ತಲ್ಲಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿಚಾರ : ನಳಿನ್ ಕುಮಾರ್ ಕಟೀಲ್ ಆಕ್ರೋಶ

ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್‍ನ ಅತ್ಯಂತ ಹೀನಾ ರಾಜಕಾರಣವಾಗಿದೆ. ಕೋವಿಡ್ ಮೊದಲ ಅಲೆ, ಎರಡನೇ ಅಲೆ ಬಂದಾಗಲೂ ಇವರು ಏನನ್ನೂ ಮಾಡಿಲ್ಲ, ಟೀಕೆಯಷ್ಟೇ ಮಾಡಿದ್ದು, ಜನರನ್ನು ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಇವತ್ತು ಎಚ್ಚರಿಕೆ ತೆಗೆದುಕೊಳ್ಳುವ ಕೆಲಸ ಆಗಬೇಕು. ಕಾರ್ಯಕಾರಿಣಿಯಲ್ಲಿ 800 ಜನರನ್ನ ನಾವು 300ಕ್ಕೆ ಇಳಿಸಿದೆವು. ಸರ್ಕಾರದ ನಿಯಮದ ಪ್ರಕಾರ ನಮ್ಮ ಬೇರೆ ಚಟುವಟಿಕೆಗಳನ್ನು ನಿಲ್ಲಿಸೋಕೂ ಯೋಚನೆ ಮಾಡಿದ್ದೇವೆ. ಮೇಕೆದಾಟು ರಾಜಕಾರಣ ಮಾಡ್ತಿದಾರೆ, ನಿಮ್ಮದೇ ಸರ್ಕಾರ ಮತ್ತು ನಿಮ್ಮದೇ ಮುಖ್ಯಮಂತ್ರಿ ಇರಲಿಲ್ವಾ? ಆಗ ನೀವು ಮೇಕೆದಾಟು ಬಗ್ಗೆ ಚರ್ಚೆ ಮಾಡಲಿಲ್ಲ, ತಯಾರಿ ಮಾಡಲಿಲ್ಲ. ಇವತ್ತು ನಮ್ಮ ಸರ್ಕಾರ ಸಂಪೂರ್ಣ ಬದ್ದತೆ ಹೊಂದಿದೆ. ನಾವು ಮೇಕೆದಾಟು ಮಾಡಿಯೇ ಮಾಡ್ತೀವಿ, ನಮ್ಮ ಕಾಲದಲ್ಲೇ ಅದು ಆಗುತ್ತೆ. ಅದಕ್ಕೆ ಈ ಕಾಂಗ್ರೆಸ್ ಪಾದಯಾತ್ರೆ ಅಗತ್ಯ ಖಂಡಿತಾ ಇಲ್ಲ. ರಾಜ್ಯದಲ್ಲಿ ಪಾದಯಾತ್ರೆ ಮಾಡಿ ಕೊರೋನಾವನ್ನ ವಿಸ್ತಾರ ಮಾಡಲು ನೋಡ್ತಿದಾರೆ. ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಸರ್ಕಾರ ಮುನ್ನೆಚ್ಚರಿಕೆಗಾಗಿ ಹಲವು ಗೈಡ್ ಲೈನ್ ಗಳನ್ನ ತರುತ್ತದೆ ಎಂದು ಹೇಳಿದರು.

Related Posts

Leave a Reply

Your email address will not be published.

How Can We Help You?