ಉಜಿರೆ ಎಸ್. ಡಿ ಎಂ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದಉದ್ಘಾಟನಾಕಾರ್ಯಕ್ರಮ

ಉಜಿರೆನಾಯಕತ್ವ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಪೂರಕವಾದಅಂಶವಾಗಿದ್ದು, ಅದು ಸಹಜವಾಗಿಯೇ  ಅಭಿವ್ಯಕ್ತಿಗೊಳ್ಳಬೇಕು ಎಂದು ಬೆಳ್ತಂಗಡಿ ತಾಲೂಕಿನ ನ್ಯಾಯವಾದಿ  ಬಿ. ಕೆ ಧನಂಜಯರಾವ್ ಹೇಳಿದರು.

ಉಜಿರೆಯಎಸ್. ಡಿ. ಎಂ  ಪದವಿ ಕಾಲೇಜಿನಲ್ಲಿ  ಪ್ರಸ್ತುತ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚಟುವಟಿಕೆಗಳನ್ನು  ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ನಾಯಕತ್ವವನ್ನು ಸ್ವೀಕರಿಸಿದಾಗ ತಮ್ಮದೆಆದಜವಾಬ್ದಾರಿಯನ್ನು ಹೊಂದಿರುತ್ತಾರೆ.ತಾವುಅಭಿವೃದ್ಧಿ ಹೊಂದುವುದರಜೊತೆತನ್ನ ಸ್ನೇಹಿತ, ವಿಭಾಗಕಾಲೇಜಿನಅಭಿವೃದ್ಧಿಗೆಕಾರಣರಾಗುತ್ತಾರೆ. ನಾಯಕರು ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಾಗಎಲ್ಲರಅಭಿವೃದ್ಧಿ ಸಾಧ್ಯಎಂದುಅವರುಅಭಿಪ್ರಾಯಪಟ್ಟರು.

ಜೀವನವನ್ನು ನೆಡೆಸುವಾಗಅಲ್ಲಿ ಬರುವಎಲ್ಲಾರಂಗದಎಲ್ಲಾ ಸ್ಥಾನಗಳಲ್ಲಿಯೂ ನಾಯಕತ್ವಎನ್ನುವುದುಇದ್ದೆಇರುತ್ತದೆ. ನಾಯಕತ್ವಗುಣವನ್ನು ನಾವು ಹೇಗೆ ನಿಭಾಯಿಸುತ್ತೇವೆಎಂಬುದುಇಲ್ಲಿ ಮುಖ್ಯವಾಗಿರುತ್ತದೆಎಂದು ತಿಳಿಸಿದರು.

ಒಬ್ಬ ನಾಯಕಎಲ್ಲಾ ವಿಷಯಗಳ ಬಗ್ಗೆ ಜ್ಞಾನ ಹೊಂದುವುದು ಮುಖ್ಯ, ಹಾಗೆಯೇ ಪಡೆದುಕೊಂಡಜ್ಞಾನದ ಬಗ್ಗೆ ಆತ್ಮವಿಶ್ವಾಸ ಹೊಂದಿರುವುದು ನಿಜವಾದ ನಾಯಕನ ಲಕ್ಷಣಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳಿಗೆ ಅವಕಾಶಗಳನ್ನು  ಸದುಪಯೋಗ ಪಡಿಸಿಕೊಳ್ಳುವ ರೀತಿ ಹಾಗೂ ದೃಢಸಂಕಲ್ಪದ ಬಗ್ಗೆ ಅರಿವು ಮೂಡಿಸುವುದೇ ಕಾರ್ಯಕ್ರಮದಉದ್ದೇಶವಾಗಿದೆವಿದ್ಯಾರ್ಥಿ ಸಂಯೋಜಕರು ಹಾಗೂ ವಿದ್ಯಾರ್ಥಿಗಳು ಪರಸ್ಪರ ಹೊಂದಾಣಿಕೆಯಿಂದ ಸಾಗಬೇಕು ಎಂದುಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದಡಾ. ಎಸ್. ಸತೀಶ್ಚಂದ್ರ ಮಾರ್ಗದರ್ಶನ ನೀಡಿದರು.

ಸಂದರ್ಭದಲ್ಲಿಉದ್ಘಾಟಕರಾದ ಬಿ. ಕೆ ಧನಂಜಯರಾವ್ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿ ಸಂಯೋಜಕರಿಗೆ ಬೋಧಿಸಿದರು.ಕಾಲೇಜಿನ ವಿನೂತನಯೋಜನೆಯಾದಹಸಿರು ಸೈನಿಕರುಇದರ ಬಗ್ಗೆ ಎನ್. ಸಿ. ಸಿ ಪ್ರಾಧ್ಯಾಪಕ ಪ್ರಸನ್ನಕುಮಾರ್  ಪರಿಚಯ ಮಾಡಿಕೊಟ್ಟರು. ವಿವಿಧ ವಿದ್ಯಾರ್ಥಿ ಸಂಘದಚಟುವಟಿಕೆಯ ಬಗ್ಗೆ  ವಿದ್ಯಾರ್ಥಿ ಸಂಯೋಜಕರಿಗೆ ಸಂದರ್ಭದಲ್ಲಿಅವರಜವಾಬ್ದಾರಿಕುರಿತುಅರಿವು ಮೂಡಿಸಿದರು.

  ಕಾರ್ಯಕ್ರಮದಲ್ಲಿಎಲ್ಲಾ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ವಿದ್ಯಾರ್ಥಿ ಸಂಘದ ಸಂಯೋಜಕರು, ಪ್ರತಿನಿಧಿಗಳು  ಉಪಸ್ಥಿತರಿದ್ದರು. ವಿದ್ಯಾರ್ಥಿಕ್ಷೇಮ ಪಾಲನಾ ಅಧಿಕಾರಿ ಜಿ. ಆರ್. ಭಟ್ ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕಗೀತೇಶ್ ವಂದಿಸಿ, ಇಂಚರ ನಿರೂಪಿಸಿದರು.

Related Posts

Leave a Reply

Your email address will not be published. Required fields are marked *

How Can We Help You?