ಸಿನಿಮಾ ವರದಿಗಾರನಾಗಲು ಸಮಯಪ್ರಜ್ಞೆ ಮುಖ್ಯ: ಕಿರಣ್ ಚಂದ್ರ

    “ಚಿತ್ತಾವಧಾನ, ಸಮಯಪ್ರಜ್ಞೆ, ಏಕಾಗ್ರತೆ ವರದಿಗಾರನಿಗೆ ಬಹಳ ಅಗತ್ಯವಾದ ಅಂಶಗಳಾಗಿದ್ದು  ಭಿನ್ನ ಯೋಚನಾ ಕ್ರಮದಿಂದಲೇ ಉತ್ತಮ ವರದಿಗಾರನಾಗಬಹುದು” ಎಂದು  ಝೀ ಕನ್ನಡ ವಾಹಿನಿಯ ಸಿನಿಮಾ ಬರಹಗಾರ ,ಮೂವಿ ಕಂಟೆಂಟ್ ರೈಟರ್  ಕಿರಣ್ ಚಂದ್ರ ಹೇಳಿದರು.

    ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಗೂಗಲ್ ಮೀಟ್ ನ ಮೂಲಕ ಏರ್ಪಡಿಸಿದ್ದ ‘ಸಿನೆಮಾ ವರದಿ’ ಕುರಿತ  ಉಪನ್ಯಾಸ  ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

     ಪ್ರೆಸ್ ಮೀಟ್ಗಳಲ್ಲಿ  ಪ್ರಶ್ನೆ ಕೇಳುವ ಸಂದರ್ಭ ವಹಿಸಬೇಕಾದ ಎಚ್ಚರಿಕೆ ಹಾಗೂ ಪೂರ್ವ ತಯಾರಿಯ ಬಗೆಗೆ ಅವರು ಮಾಹಿತಿ ನೀಡಿದರು.        

      “ಸಿನಿಮಾ ತಂಡ ಅಥವಾ ನಿರ್ದೇಶಕ, ನಿರ್ಮಾಪಕರೊಂದಿಗೆ   ಒಳ್ಳೆಯ ಸಂಪರ್ಕವಿತ್ತು ಕೈಗೊಂಡಿರಬೇಕು, ಸಾಮಾಜಿಕ ಜಾಲತಾಣವನ್ನು ಗಮನಿಸುವ  ಹಾಗೂ ವಾರ್ತೆಗಳನ್ನು ವೀಕ್ಷಿಸುವ  ಮೂಲಕ ಅಪ್ಡೇಟ್ ಆಗಿರಬೇಕು” ಎಂದು ಅವರು ತಿಳಿಸಿದರು.

      ವಿಭಾಗದ ಪ್ರಾಧ್ಯಾಪಕಿ ಶೃತಿ ಜೈನ್ ಅತಿಥಿಯನ್ನು ಪರಿಚಯಿಸಿ ಸ್ವಾಗತಿಸಿದರು. ವಿದ್ಯಾರ್ಥಿ ಶ್ರವಣ್ ಉಪಾಧ್ಯಾಯ ವಂದಿಸಿದರು.

Related Posts

Leave a Reply

Your email address will not be published.

How Can We Help You?