‘ಚಿಕ್ಕ ಅವಕಾಶ ದೊಡ್ಡ ಬದಲಾವಣೆಯನ್ನೇ ತರಬಲ್ಲದು’ : ಕರ್ನಲ್ ನಿತಿನ್ ಬಿಡೆ

“ ಮುಂದೇನು ಮಾಡಲಿ ಎಂದು ಯೋಚಿಸುತ್ತಾ ಕಾಲಹರಣ ಮಾಡುವುದರ ಬದಲು ಸಿಗುವ ಅವಕಾಶಗಳನ್ನು ಬಳಸಿಕೊಳ್ಳವುದು ಜಾಣತನ, ಕೆಲವು ಭರವಸೆ ಮಾತುಗಳಿಗಿಂತ ಇಂದು ಮಾಡುವ ಚಿಕ್ಕ ಕೆಲಸ ದೊಡ್ಡ ಬದಲಾವಣೆ ತರಬಲ್ಲದು” ಎಂದು ಕರ್ನಲ್ ನಿತಿನ್ ಬಿಡೆ ಮಾತನಾಡಿದರು.


ಡಿಸೆಂಬರ್ 27ರಂದು ಉಜಿರೆಯ ಶ್ರೀ.ಧ. ಮ. ಕಾಲೇಜಿನಲ್ಲಿ ನಡೆದ ವಾಣಿಜ್ಯ ಹಾಗೂ ವ್ಯವಹಾರ ಅಧ್ಯಯನ ವಿಭಾಗದ ‘ಕಾಮರ್ಸ್ ಕ್ಯಾಂಪಸ್ ಅಸೋಸಿಯೇಶನ್’ ನ ಉದ್ಘಾಟನೆಯ ಸಂದರ್ಭದಲ್ಲಿ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಪ್ರತಿಯೊಬ್ಬರು ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು, ನಂತರ ತನ್ನಿಷ್ಟದ ಕೆಲಸವನ್ನು ಆಯ್ದುಕೊಳ್ಳಬೇಕು, ಪ್ರಯತ್ನವನ್ನೇ ಪಡೆದ ಕನಸು ಕಂಡರೆ ಅದು ವ್ಯರ್ಥ ; ನಮ್ಮ ಸಾಮಥ್ರ್ಯ , ದೌರ್ಬಲ್ಯದ ಅರಿವು ನಮಗಿದ್ದರೆ ಮಾರ್ಗ ಸುಲಭ” ಎಂದರು. ಮಾತಿನ ಬಳಿಕ ವಿದ್ಯಾರ್ಥಿಗಳೊಡನೆ ಸಂವಾದಿಸಿದಕ್ಕಿಳಿದರು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶಪಾಲ ಡಾ.ಎಸ್. ಸತೀಶ್ಚಂದ್ರ, ಕರ್ನಲ್ ರವರ ಕಾಲೇಜು ದಿನಗಳನ್ನು ನೆನಪಿಸಿಕೊಂಡರು. ಅಂದು ಅವರ ಭಾಗವಹಿಸುವಿಕೆ, ಮಾತುಗಾರಿಕೆ, ಜವಾಬ್ದಾರಿ ನಿರ್ವಹಣೆಯು ಇಂದಿನ ಈ ಸಾಧನೆಗೆ ಮೆಟ್ಟಿಲಾಗಿದ್ದುದ್ದು ಎಂದು ಹಂಚಿಕೊಂಡರು.


ಈ ಸಂದರ್ಭದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಎನ್. ಉದಯಚಂದ್ರ ವಿದ್ಯಾರ್ಥಿ ಪ್ರತಿನಿಧಿಗಳ ಪ್ರತಿಜ್ಞೆ ತೆಗೆದುಕೊಂಡರು. ವಾಣಿಜ್ಯ ವಿಭಾಗದ ಭಿತ್ತಿ ಪತ್ರಿಕೆಯಾದ ‘ವನಿಕಾ ‘ ವನ್ನು ಬಿಡುಗಡೆಗೊಳಿಸಲಾಯಿತು.

Related Posts

Leave a Reply

Your email address will not be published. Required fields are marked *

How Can We Help You?